ರಾಣೆಬೆನ್ನೂರ: ಅತ್ತೆ ತೀರಿಕೊಂಡ ಬೇಸರದಿಂದ ಸೊಸೆ ಕೂಡ ಮಾನಸಿಕ ಮಾಡಿಕೊಂಡು ಪಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರೇಕುಪ್ಪಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬಸಮ್ಮ ರಾಮಪ್ಪ ಕೆಂಚಮ್ಮನವರ (45) ಮೃತ ಮಹಿಳೆ.
ಇವರು ತಮ್ಮ ಅತ್ತೆ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರಿಂದ ಮಾನಸಿಕ ಮಾಡಿಕೊಂಡಿದ್ದರು. ಇದರಿಂದಾಗಿ ಮನೆಯಲ್ಲಿದ್ದ ಪಿನಾಯಿಲ್ ಕುಡಿದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.