ಜಿಲ್ಲೆ

ಕೌಟುಂಬಿಕ ಕಲಹ: ಜಲಾಶಯದಲ್ಲಿ ಮಕ್ಕಳನ್ನು ಮುಳುಗಿಸಿ ದುರಂತ ಅಂತ್ಯ ಕಂಡ ತಾಯಿ

ಬೆಳಗಾವಿ: ಕೌಟುಂಬಿಕ ಕಲಹ‌ದಿಂದ ಬೇಸತ್ತ ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂತಹ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ವಟ್ನಾಳ ಗ್ರಾಮ ಹೊರವಲಯದ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಕಂಚನೂರ ಗ್ರಾಮದ ಶಶಿಕಲಾ ಪರಸಪ್ಪ ಗೋಡಿ(32), ಮಕ್ಕಳಾದ ಸುದೀಪ್ (4) ಮತ್ತು ರಾಧಿಕಾ(3) ಮೃತ ದುರ್ದೈವಿಗಳು. ಜಲಾಶಯದ ಹಿನ್ನೀರಿನಲ್ಲಿ ಮಕ್ಕಳನ್ನು ನೀರಲ್ಲಿ ಮುಳುಗಿಸಿ ಕೊಂದ ಬಳಿಕ ತಾಯಿಯೂ ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.