ಜಿಲ್ಲೆ

ನೆತ್ತೋಡಿಯಲ್ಲಿ ಮೊಸರು ಕುಡಿಕೆ ಉತ್ಸವ : ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಆಯೋಜನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ನೆತ್ತೋಡಿ ನಮೋ ಫ್ರೆಂಡ್ಸ್ ಕ್ಲಬ್ ವತಿಯಿಂದ ಗೋಳಿಕಟ್ಟೆಯಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಭಾನುವಾರ ಜರುಗಿತು.

ಹನ್ನೆರಡು ಕವಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಮೋ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪುರಸಭಾ ಸದಸ್ಯೆ ಧನಲಕ್ಷ್ಮೀ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪ್ರದೀಪ್ ಕುಮಾರ್ ವಾಲ್ಪಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್ ಕೊಟ್ಟಾರಿ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪದಲ್ಲಿ ಪುರಸಭೆ ಮಾಜಿ ಸದಸ್ಯ ದಿನೇಶ್ ಮಾರೂರು, ಉದ್ಯಮಿಗಳಾದ ಸಂತೋಷ್ ಪೂಜಾರಿ ಕಾಂಜರಡ್ಡ, ಗಣೇಶ್ ಸುವರ್ಣ, ಮೋಹನ್ ಸುವರ್ಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ವಿಶ್ವನಾಥ ಪೂಜಾರಿ, ವಿಜಯ ಸುವರ್ಣ, ಶೇಖರ್ ಡಿ.ಕೊಡಂಗೆ, ಸಂಪತ್ ನೆತ್ತೋಡಿ, ಪ್ರವೀಣ್ ಮಾರೂರು, ಸುನೀಲ್ ಪೂಜಾರಿ, ಲಕ್ಷ್ಮೀ ಗಣೇಶ್ ಮತ್ತಿತರರಿದ್ದರು. ಚೈತ್ರಾ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

ಎನ್‌ಎಫ್‌ಸಿ, ಸೂಪರ್ ಬಾಯ್ಸ ವಿಜೇತರು

ಹಗ್ಗಜಗ್ಗಾಟದಲ್ಲಿ ಎನ್‌ಎಫ್‌ಸಿ ನೆತ್ತೋಡಿ ಪ್ರಥಮ ಸ್ಥಾನ, ಮಾರೂರಿನ ಸೂಪರ್ ಬಾಯ್ಸ ತಂಡ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್ ಪಂದ್ಯಾಟದಲ್ಲಿ ಸೂಪರ್ ಬಾಯ್ಸ ಬಿ. ತಂಡ ಪ್ರಥಮ, ಸೂಪರ್ ಬಾಯ್ಸ ಎ. ದ್ವಿತೀಯ ಸ್ಥಾನ ಪಡೆದುಕೊಂಡವು.