ಜಿಲ್ಲೆ

ಸಂಘಟಿತ ಕಾರ್ಯದಿಂದ ಬಾಂಧವ್ಯ ವೃದ್ಧಿ : ಮಿತ್ತಬೈಲು ಮೊಸರು ಕುಡಿಕೆ ಉತ್ಸವದಲ್ಲಿ ವಾಸುದೇವ ಅಭಿಮತ

ಸೌಮ್ಯ ಆರ್

ಮೂಡುಬಿದಿರೆ: ಪುತ್ತಿಗೆ, ಮಿತ್ತಬೈಲು ಗ್ರಾಮಸ್ಥರು ಜತೆಗೂಡಿ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸುವುದರಿಂದ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ, ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ ಎಂದು ಅಧ್ಯಕ್ಷ ವಾಸುದೇವ ನಾಯಕ್ ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಿತ್ತಬೈಲು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಮೊಸರುಕುಡಿಕೆ ಹಾಗೂ ವಿವಿಧ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ರಮೇಶ್ ನಾಯಕ್ ಮೆಸ್ಕಾಂ ಲೈನ್‌ಮೆನ್ ಸಂಜಯ್ ಹಾಗೂ ಬಝಿಲ್ ವಿನಜಸ್ ಅವರನ್ನು ಸನ್ಮಾನಿಸಿದರು. ಮುದ್ಧುಕೃಷ್ಣ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿತು.

ನಿವೃತ್ತ ಶಿಕ್ಷಕ ನಾಗೇಶ್, ಭಜನಾ ಮಂಡಳಿ ಟ್ರಸ್ಟಿ ಗಿರಿಧರ ನಾಯಕ್, ಪ್ರಮುಖರಾದ ಗೋವರ್ಧನ್ ನಾಯಕ್, ನರಸಿಂಹ ಪ್ರಭು, ಸುರೇಶ್ ಕರ್ಮರನ್, ದೈವ ನರ್ತಕ ಸುರೇಶ್, ಮಿತ್ತಬೈಲು ಆಟೋ ಚಾಲಕ-ಮಾಲೀಕ ಸಂಘದ ಅಧ್ಯಕ್ಷ ಭೋಜ ನಾಯಕ್, ಸೋಮು, ಮಾನವ ಹಕ್ಕು ಮಹಿಳಾ ಸಮಿತಿ ಸದಸ್ಯೆ ಉಷಾ ಭಂಡಾರಿ, ಸಮಿತಿಯ ಪ್ರಮುಖರಾದ ರಘು, ನವೀನ್, ಸಂದೇಶ ಪೂಜಾರಿ, ಸಮಿತಿ ಹಾಗೂ ಆಟೋ ಸಂಘದ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು. ಶಿವರಾಜ್ ಕರ್ಕೇರ ಸಂಪಿಗೆ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ಶೈಲಾ ಎನ್.ನಾಯಕ್, ಶೋಭಾ ನಾಯ್ಕ, ರಾಧಿಕಾ ರಮೇಶ್ ನಾಯಕ್ ಸಹಕರಿಸಿದರು.