ಅನ್ಸಾರ್ ಇನೋಳಿ ಉಳ್ಳಾಲ
ವಿಭಿನ್ನ ಧರ್ಮೀಯರು ಪರಸ್ಪರ ಧಾರ್ಮಿಕ ನೆಲೆಯಲ್ಲಿ ವಿಭಿನ್ನ ಧೋರಣೆ ತಳೆದು ಸಮಾಜ ವಿಘಟನೆಯತ್ತ ಸಾಗಿರುವ ಕಲಘಟ್ಟದಲ್ಲೂ ಕೊಣಾಜೆಯಲ್ಲಿ ಸೌಹಾರ್ದಕ್ಕೆ ಎಂದಿಗೂ ಅಡ್ಡಿಯಾಗಿಲ್ಲ ಎನ್ನುವುದಕ್ಕೆ ಹಲವು ವರ್ಷಗಳ ಹಿಂದೆ ಸರ್ವಧರ್ಮೀಯರು ಸೇರಿ ಆರಂಭಿಸಿದ ಮೊಸರುಕುಡಿಕೆ ಉತ್ಸವ ಇಂದಿಗೂ ಅನಾಚೂನವಾಗಿ ನಡೆಯುವುದು ಸಾಕ್ಷಿ. ಸರ್ವಧರ್ಮೀಯರನ್ನು ಒಳಗೊಂಡ ಕೊಣಾಜೆ ಗ್ರಾಮದ ಮಂಗಳಾ ಗ್ರಾಮೀಣ ಯುವಕ ಸಂಘ 41ನೇ ವರ್ಷಕ್ಕೆ ಕಾಲಿಡುತ್ತಿದ್ದು ಗ್ರಾಮದಲ್ಲಿ ಸೌಹಾರ್ದಕ್ಕೆ ಭದ್ರ ಅಡಿಪಾಯ ಹಾಕಿದೆ. 1985ರಲ್ಲಿ ಸ್ಥಾಪನೆಗೊಂಡಿದ್ದು, ಗ್ರಾಮಸ್ಥರು ಜತೆಯಾಗಿ ಸಂಘ ಆರಂಭಿಸಿದಾಗ 120ರಷ್ಟು ಸದಸ್ಯರು ಸಂಘಕ್ಕೆ ಬಲ ತುಂಬಿದ್ದರು. ಸ್ಥಾಪಕಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಧ್ಯಕ್ಷರಾಗಿ ಅಚ್ಯುತ ಗಟ್ಟಿ ಆಯ್ಕೆಯಾಗಿದ್ದರು. ಪ್ರಸ್ತುತ 45 ಸದಸ್ಯರಿದ್ದಾರೆ. ಮಂಗಳ ಗ್ರಾಮೀಣ ಯುವಕ ಸಂಘದ ಪದಾಧಿಕಾರಿಗಳಾಗಿ ಸರ್ವಧರ್ಮದ ಗಣ್ಯರು ಕಾರ್ಯನಿರ್ವಹಿಸಿದ್ದು, ಅಬ್ದುಲ್ ರಹಿಮಾನ್ ಕೋಡಿಜಾಲ್, ಮಾಧವ ಗಟ್ಟಿ, ಅಬ್ದುಲ್ ನಾಸೀರ್ ಕೆ.ಕೆ, ಅಚ್ಯುತ ಗಟ್ಟಿ ಕೊಣಾಜೆ ಆ ಸಾಲಿನಲ್ಲಿದ್ದಾರೆ. ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರ ನಿರಂತರ ಮಾರ್ಗದರ್ಶನ ಸ್ಮರಣೀಯ. ಕಳೆದ 13 ವರ್ಷಗಳಿಂದ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ಅಧ್ಯಕ್ಷರಾಗಿದ್ದಾರೆ. ಮೊಸರುಕುಡಿಕೆ ಉತ್ಸವ ಸಮಿತಿಯೂ ಇದ್ದು ಅಚ್ಯುತ ಗಟ್ಟಿ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲೂ ಎಲ್ಲ ಧರ್ಮದವರು ಇದ್ದಾರೆ. ಸಂಘಕ್ಕೆ ನೆಹರೂ ಯುವಕೇಂದ್ರದಿಂದ ಎರಡು ಬಾರಿ ಜಿಲ್ಲಾ ಯುವಸೇವಾ ಪ್ರಶಸ್ತಿಯೂ ಲಭಿಸಿದೆ. ಹಿರಿಯರ ಆಶೋತ್ತರಗಳಿಗೆ ಚ್ಯುತಿ ಇಲ್ಲದಂತೆ ಸೇವೆ ಸಮಾಜಮುಖಿ ಚಟುವಟಿಕೆ ನಡೆಸುತ್ತಾ ಬಂದಿರುವ ಸಂಘಟನೆ ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುವಲ್ಲೂ ಮುಂದಿದೆ. ಎಲ್ಲ ಕಾರ್ಯಕ್ರಮಗಳಲ್ಲೂ ಜಾತಿ, ಧರ್ಮ ಮೀರಿ ಗ್ರಾಮಸ್ಥರು ಭಾಗವಹಿಸುತ್ತಾ ಬಂದಿರುವುದರಿಂದ ಐಕ್ಯ ಎದ್ದು ಕಾಣುತ್ತದೆ. ಹಿರಿಯರ ಆಶೋತ್ತರಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಇಂದಿಗೂ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಇಂಥ ಕಾರ್ಯಕ್ರಮಗಳಿಗೆ ಇನ್ನಷ್ಟು ಬಲ ತುಂಬಿರುವುದು ಸಾರ್ವಜನಿಕ ಮೊಸರುಕುಡಿಕೆ ಉತ್ಸವ. ಪ್ರತಿವರ್ಷವೂ ಈ ಉತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆಗಳು, ಭಕ್ತಿ ಪ್ರಧಾನ ಸ್ಪರ್ಧೆಗಳು ನಡೆಸುತ್ತಾ ಬರಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ನೀಡುವ ಕಾರ್ಯಕ್ರಮವೂ ಇರುತ್ತದೆ. ಮೊಸರು ಕುಡಿಕೆ ಉತ್ಸವಕ್ಕೆ ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘವೂ ಸಾಥ್ ನೀಡುತ್ತಾ ಬಂದಿದೆ.
ಕೊಣಾಜೆ ಗ್ರಾಮದಲ್ಲಿ ಇದುವರೆಗೂ ಕೋಮು ಸಂಬಂಧಿತ ವಿಚಾರದಲ್ಲಿ ವೈಮನಸ್ಸು ಎದುರಾಗಿಲ್ಲ. ಮಂಗಳಾ ಗ್ರಾಮೀಣ ಯುವಕ ಸಂಘ ರಾಷ್ಟ್ರೀಯ, ನಾಡಹಬ್ಬಗಳು, ಸರ್ವಧರ್ಮೀಯ ಹಬ್ಬಗಳ ಜತೆ ಸಾಮಾಜಿಕ ಚಟುಚಟಿಕೆಗಳನ್ನೂ ಎಲ್ಲರನ್ನೂ ಸೇರಿಸಿ ನಡೆಸಿಕೊಂಡು ಬಂದಿರುವುದರಿಂದ ಉತ್ತಮ ಸಂಘವಾಗಿ ಮೂಡಿಬಂದಿದೆ. ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ಕೊಣಾಜೆ ಮಂಗಳಾ ಗ್ರಾಮೀಣ ಯುವಕ ಸಂಘ ಅಧ್ಯಕ್ಷ ಗ್ರಾಮದಲ್ಲಿ ಎಲ್ಲರ ಸಹಕಾರದೊಂದಿಗೆ ಸರ್ವಧರ್ಮೀಯರೂ ಸೇರಿ ಮೊಸರುಕುಡಿಕೆ ಉತ್ಸವ ನಡೆಸಿಕೊಂಡು ಬಂದಿದ್ದೇವೆ. ಕಾರ್ಯಕ್ರಮ ಪ್ರಯುಕ್ತ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಅಭಿನಂದನೆ ನಡೆಸುತ್ತಾ ಬರಲಾಗಿದೆ. ಇದುವರೆಗೆ ಈ ವಿಚಾರದಲ್ಲಿ ಯಾವುದೇ ವೈಮನಸ್ಸು ಎದುರಾಗಿಲ್ಲ. ಅಚ್ಯುತ ಗಟ್ಟಿ ಕೊಣಾಜೆ ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ https://www.vijayavani.net/model-for-the-school-district-of-the-century https://www.vijayavani.net/land-victims-who-have-not-filed-documents