ತನೂಡಿ ಗ್ರಾಮದ ಶಂಕರಕೊಡಿಗೆ-ಗಣಪತಿಕಟ್ಟೆ ರಸ್ತೆಯ ಮೋರಿ ಕೊಚ್ಚಿಕೊಂಡುಹೋಗಿರುವುದು.  
ಜಿಲ್ಲೆ

ಕೊಚ್ಚಿಕೊಂಡು ಹೋದ ಮೋರಿ

ಎಸ್.ಎನ್.ರವೀಂದ್ರ

ಕಳಸ: ತನೂಡಿ ಗ್ರಾಮದ ಶಂಕರಕೊಡಿಗೆಯಿಂದ ಗಣಪತಿಕಟ್ಟೆಗೆ ಹೋಗುವ ರಸ್ತೆಯ ಮೋರಿ ಭಾರಿ ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದು ಸಂಪರ್ಕ ಕಡಿತಗೊಂಡಿದೆ.

ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದು ಈ ಭಾಗದ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆಯೇ ಇಲ್ಲವಾಗಿದೆ. ಸೋಮೇಶ್ವರಖಾನ್‌ನಿಂದ ಶಂಕರಕೊಡಿಗೆ ಸಂಪರ್ಕಿಸುವ ಮುಖ್ಯರಸ್ತೆ ಭಾರಿ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚರಿಸಲಾಗದು. ನೇಪಾ ದೇವಸ್ಥಾನದ ಬಳಿ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಕುಸಿಯುವ ಸಾಧ್ಯತೆ ಇದೆ.