ಜಿಲ್ಲೆ

ಶೇ.50ಕ್ಕಿಂತ ಅಧಿಕ ಹಾನಿ

ವೀರೇಶ ಸೌದ್ರಿ

ರಟ್ಟಿಹಳ್ಳಿ: ತಾಲೂಕಿನಲ್ಲಿ ಒಟ್ಟು 31,500 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. 24 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 2 ಸಾವಿರ ಹೆಕ್ಟೇರ್ ಹತ್ತಿ, 1500 ಹೆಕ್ಟೇರ್ ಭತ್ತ, 1 ಸಾವಿರ ಹೆಕ್ಟೇರ್ ಶೇಂಗಾ, 800 ಹೆಕ್ಟೇರ್ ಸೋಯಾಬೀನ್ ಮತ್ತಿತರ ಬೆಳೆ ಬೆಳೆಯಲಾಗಿದೆ.

ಮಳೆ ಕೊರತೆಯಿಂದಾಗಿ ತಾಲೂಕಿನಲ್ಲಿ ಕೆಲ ರೈತರು ಅಳಿದುಳಿದ ಬೆಳೆ ರಕ್ಷಣೆಗೆ ತುಂಗಾ ಮೇಲ್ದಂಡೆಯ ಕಾಲುವೆ ನೀರು ಹಾಯಿಸುತ್ತಿದ್ದಾರೆ.

ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಆ್ಯಪ್ ಮೂಲಕ ತಾಲೂಕಿನ ನಾಗವಂದ, ಕಡೂರ, ಲಿಂಗದೇವರಕೊಪ್ಪ, ಗುಂಡಗಟ್ಟಿ, ಗಲಗಿನಕಟ್ಟಿ, ಕೋಡಮಗ್ಗಿ, ಹುಲ್ಲತ್ತಿ ಗ್ರಾಮಗಳ ತಲಾ 10 ಜಮೀನುಗಳಲ್ಲಿ ಜಂಟಿ ಸಮೀಕ್ಷೆ ಕೈಗೊಂಡಿದ್ದಾರೆ. ಸಮೀಕ್ಷೆಯಲ್ಲಿ ಎಲ್ಲ ಬೆಳೆಗಳು ಮಳೆಯ ಅಭಾವದಿಂದಾಗಿ ಶೇ. 50ಕ್ಕಿಂತ ಅಧಿಕವಾಗಿ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

‘ಸರ್ಕಾರದ ನಿರ್ದೇಶನದಂತೆ ತಾಲೂಕಿನ ಆಯ್ದ 7 ಗ್ರಾಮಗಳಲ್ಲಿ ತಲಾ 10 ಜಮೀನುಗಳಲ್ಲಿ ಸಮೀಕ್ಷೆ ಮಾಡಿ, ಬೆಳೆ ಹಾನಿಯಾದ ಕುರಿತು ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಕೃಷಿ ಅಧಿಕಾರಿ ನಾಗರಾಜ ಕಾತರಿಕಿ ತಿಳಿಸಿದ್ದಾರೆ.