ಪ್ಲಾಸ್ಟಿಕ್​ ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್​ ವಶಪಡಿಸಿಕೊಂಡು ದಂಡ ವಿಧಿಸುತ್ತಿರುವ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಮತ್ತು ತಂಡ. 
ಜಿಲ್ಲೆ

350 ಕೆಜಿಗೂ ಅಧಿಕ ಪ್ಲಾಸ್ಟಿಕ್​ ವಶ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೇವನಹಳ್ಳಿ : ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಮತ್ತು ಸಿಬ್ಬಂದಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ಮಾರ್ಗದರ್ಶನದಲ್ಲಿ ಪಟ್ಟಣದ ಹಲವೆಡೆ ಪ್ಲಾಸ್ಟಿಕ್​ ಮಾರಟ ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದರು.

ಪರಿಸರಕ್ಕೆ ಹಾನಿಕಾರಕ ಮತ್ತು 70 ಮೈಕ್ರಾನ್​ಗಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್​ ಉತ್ಪನ್ನಗಳಾದ ಲೋಟ, ಡೈನಿಂಗ್​ಟೇಬಲ್​ ರೋಲ್​, ಸ್ಪೂನ್​, ಕವರ್​ ಸೇರಿ ಮುಂತಾದವುಗಳನ್ನು ಮಾರಾಟ ಮಾಡಬಾರದು ಎಂದು ಪುರಸಭೆಯಿಂದ ನಿರ್ದೇಶನ ನೀಡಿದ್ದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಳಿಗೆಗಳ ಮೇಲೆ ದಾಳಿ ನಡೆಸಿ 350 ಕೆಜಿಗೂ ಅಧಿಕ ಪ್ಲಾಸ್ಟಿಕ್​ ವಸ್ತುಗಳನ್ನು ವಶಪಡಿಸಿಕೊಂಡು 20 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಆರೋಗ್ಯ ನಿರೀಕ್ಷಕಿ ಶ್ರೀದೇವಿ ತಿಳಿಸಿದರು. ಮೂರು ಬಾರಿ ದಂಡ ವಿಧಿಸಿದರೂ ಮಾರಾಟ ಮಾಡುವವರ ಮಳಿಗೆಗಳನ್ನು ಸೀಜ್​ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಬ್ಬಂದಿ ಎಫ್​.ಎಸ್​.ಟಿಯ ಆದರ್ಶ, ಗೋಪಾಲ್​, ಅನಿಲ್​, ಮುನಿರಾಜು, ಮಂಜುನಾಥ್​ ಇದ್ದರು.