ಬೆಳಗಾವಿ: ರಾಜ್ಯ ಜೈನ ಜಾಗೃತಿ ಸಂಘ, ಕರ್ನಾಟಕ ಪ್ರಾಂತ ಜೈನ ಮಿಲನ ಮಹಾಸಂಘ ಆರೋಗ್ಯ ವಿಭಾಗ ಮತ್ತು ಆರ್ಥೋ ಮತ್ತು ಟ್ರಾಮಾ ಸೆಂಟರ್ ಜಂಟಿಯಾಗಿ ಬೆಳಗಾವಿಯ ಜೈನ ಸಮಾಜ ಆವರಣದಲ್ಲಿ ಜೂ.7 ಮತ್ತು 8ರಂದು ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು. ಆಚಾರ್ಯ 108 ಗುಣಧರ ನಂದಿ ಮುನಿಮಹಾರಾಜ ಅವರ ದೈವಿಕ ಪ್ರೇರಣೆಯಡಿ ಶಿಬಿರ ಆಯೋಜಿಸಲಾಗಿತ್ತು. ಎರಡು ದಿನಗಳ ಶಿಬಿರದಲ್ಲಿ 300ಕ್ಕೂ ಹೆಚ್ಚು ರೋಗಿಗಳು ಉಚಿತ ಆರೋಗ್ಯ ಸೇವೆ ಪಡೆದರು. ರೋಗಿಗಳನ್ನು ಅನುಭವಿ ವೈದ್ಯರಾದ ಡಾ. ದೇವಗೌಡ, ಡಾ.ಜಗದೀಶ ಟಿ. ತಪಾಸಣೆ ಮಾಡಿ, ಸಮಾಲೋಚನೆ ನಡೆಸಿದರು.