ಜಿಲ್ಲೆ

ಶೇ. 20ರಷ್ಟು ಲಾಭ ಕೊಡುವುದಾಗಿ 49 ಲಕ್ಷ ರೂ. ವಂಚನೆ

Haveri - Kariyappa Aralikatti

ಹಾವೇರಿ: ಎಂಎಚ್​ಐಪಿಒಬಿ ಸ್ಪಾರ್​ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ. 20ರಷ್ಟು ಲಾಭ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 49 ಲಕ್ಷ ರೂ. ತೆಗೆದುಕೊಂಡು ವಂಚಿಸಿದ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಹಿರೇಕೆರೂರ ಪಟ್ಟಣದ ಅಮರನಾಥ ಓಂಕಾರಪ್ಪ ಕುಂಕಮಗಾರ (33) ವಂಚನೆಗೊಳಗಾದವರು.

ಇವರಿಗೆ ಎಂಎಚ್​ಐಪಿಒಬಿ ಸ್ಪಾರ್​ ಕಂಪನಿ ಮ್ಯಾನೇಜರ್​ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ. 20ರಷ್ಟು ಲಾಭ ನೀಡಲಾಗುವುದು ಎಂದು ನಂಬಿಸಿದ್ದಾನೆ. ಅಲ್ಲದೆ ಅಮರನಾಥ ಅವರ ವಿವಿಧ ಖಾತೆಗಳಿಂದ 49.77 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.