ಜಿಲ್ಲೆ

ಹೆಚ್ಚಿನ ಹಣ ಹಾಕುವ ನೆಪದಲ್ಲಿ 13.42 ಲಕ್ಷ ರೂ. ವಂಚನೆ

ಹಾವೇರಿ: ಆನ್​ಲೈನ್​ ರಿಯಲ್​ ಎಸ್ಟೇಟ್​ ಎಕ್ಸ್​ಪೋಜರ್​ಗೆ ಮತ್ತು ಲಕ್ಸರಿ ಎಕ್ಸ್​ಪೋಜರ್​ಗೆ ಹಣ ಹಾಕಿದರೆ ನಿಮಗೆ ಹೆಚ್ಚಿನ ಹಣ ಹಾಕುತ್ತೇವೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 13.42 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹಿರೇಕೆರೂರ ತಾಲೂಕಿನ ಹಂಸಬಾವಿಯ ಮಧು (30) ಎಂಬುವರಿಗೆ ವಂಚಿಸಿರುವುದು.
ಇವರ ವಾಟ್ಸಅಪ್​ಗೆ ಅಪರಿಚಿತ ವ್ಯಕ್ತಿ ಆನ್​ಲೈನ್​ ರಿಯಲ್​ ಎಸ್ಟೇಟ್​ ಎಕ್ಸ್​ಪೋಜರ್​ಗೆ ಮತ್ತು ಲಕ್ಸರಿ ಎಕ್ಸ್​ಪೋಜರ್​ಗೆ ಹಣ ಹಾಕಿದರೆ ನಿಮಗೆ ಹೆಚ್ಚಿನ ಹಣ ಹಾಕುತ್ತೇವೆ ಎಂದು ಮೇಸೆಜ್​ ಕಳುಹಿಸಿ ನಂಬಿಸಿದ್ದಾನೆ. ಇದನ್ನು ನಂಬಿದ ಮಧು ತಮ್ಮ ವಿವಿಧ ಖಾತೆಯಿಂದ 13.42 ಲಕ್ಷ ರೂ. ಹಾಕಿದ್ದಾರೆ. ಆದರೆ, ಮರಳಿ ಯಾವುದೆ ಹಣ ಬರದಿದ್ದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂ ಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.