ಮಾನ್ವಿ: ಹಿಂಗಾರು ಜೋಳ ಖರೀದಿ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ರೈತಪರ ಸಂಘಟನೆಗಳು ಮಂಗಳವಾರ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಜೋಳ ಖರೀದಿ ಮಿತಿ ಹೆಚ್ಚಿಸದಿದ್ದರೆ ಹೋರಾಟ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಿಗಿ ಮಾತನಾಡಿ, ಖರೀದಿ ಕೇಂದ್ರಗಳಲ್ಲಿ ನಾಲ್ಕು ತಿಂಗಳು ಕಳೆದರೂ ರೈತರಿಂದ ಜೋಳ ಖರೀದಿ ಮಾಡದಿರುವುದು ಖಂಡನೀಯ. ರೈತರಿಂದ ಪೂರ್ಣ ಪ್ರಮಾಣದಲ್ಲಿ ಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು. ಜೋಳ ಸಾಗಣೆಗೆ ಹೆಚ್ಚುವರಿ ಲಾರಿಗಳ ವ್ಯವಸ್ಥೆ ಮಾಡಬೇಕು.
ಹಿಂಗಾರು ಜೋಳ ನೋಂದಣಿ ಮಾಡಿಕೊಳ್ಳಲು ಇನ್ನೊಮ್ಮೆ ಅವಕಾಶ ನೀಡಬೇಕು ಆಗ್ರಹಿಸಿದರು. ಪ್ರಭಾರ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಮತ್ತು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಲಾಯಿತು.
ಟಿಎಪಿಸಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಭೋಗಾವತಿ, ಪ್ರಮುಖರಾದ ವೀರಭದ್ರಗೌಡ, ಚಂದ್ರಕಲಾಧರ ಸ್ವಾಮಿ, ವಿರೂಪಾಕ್ಷಗೌಡ, ಕೆ.ನಾಗನಗೌಡ, ಕೆ.ವೈ.ಬಸವರಾಜ ನಾಯಕ, ಹೊಳೆಯಪ್ಪ ಉಟಕನೂರು, ರವಿಕುಮಾರ, ಶರಣಬಸವ ಪೋತ್ನಾಳ್, ಮುತ್ತಣ್ಣ ನಾಯಕ, ರಾಮಕೃಷ್ಣ ಪೋತ್ನಾಳ್ ಇತರರಿದ್ದರು.