ಇಂಡಿ ಪಟ್ಟಣದ ಸಿ.ವಿ.ರಾಮನ್ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ತಾಲೂಕುಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ತಾಲೂಕುಮಟ್ಟದ ಕ್ರೀಡಾಕೂಟವನ್ನು ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಪಪೂ ಇಲಾಖೆ ನಿರ್ದೇಶಕ ಎಸ್.ಎಸ್. ಬಗಲಿ, ಮಂಜುನಾಥ ಕಾಮಗೊಂಡ, ಅನಂತ ಜೈನ, ಮಹಾವೀರ ವರ್ಧಮಾನ ಇತರರಿದ್ದರು. 
ಜಿಲ್ಲೆ

ಕ್ರೀಡೆ ಉತ್ತೇಜನಕ್ಕೆ ಹೆಚ್ಚಿನ ಅನುದಾನ ಅಗತ್ಯ : ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ

ಇಂಡಿ: ಕ್ರೀಡಾ ವಲಯದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಸಿ.ವಿ.ರಾಮನ್ ವಿಜ್ಞಾನ ಪಪೂ ಮಹಾವಿದ್ಯಾಲಯದಲ್ಲಿ ಸೋಮವಾರ ಪಪೂ ಮಹಾವಿದ್ಯಾಲಯಗಳ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳಿಗೆ ಯಾವುದೇ ಸವಲತ್ತುಗಳಿಲ್ಲ. ಸರಿಯಾದ ಮಾರ್ಗದರ್ಶನವಿಲ್ಲ, ಕ್ರೀಡೆಗೆ ಬೇಕಾಗುವ ಉಪಕರಣಗಳಿಲ್ಲ ಎಂದು ವಿಷಾದಿಸಿದರು.
ಒಲಿಂಪಿಕ್ಸ್, ಏಷಿಯನ್, ದಸರಾ ಕ್ರೀಡೆಗಳು ಸೇರಿ ನಮ್ಮ ಕ್ರೀಡಾಪಟುಗಳ ಸಾಧನೆ ಮೆಚ್ಚುವಂತದ್ದು, ಹಾಕಿ ದಂತಕತೆ ಮೇಜರ್ ಧ್ಯಾನಚಂದ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಸೇರಿ ಅನೇಕ ಕ್ರೀಡಾಪಟುಗಳು ಗ್ರಾಮೀಣ ಭಾಗದಲ್ಲಿ ಮತ್ತು ಬಡತನದಲ್ಲಿ ಜನಿಸಿದರೂ ಶ್ರೇಷ್ಠ ಕ್ರೀಡಾಪಟುಗಳಾಗಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಪಪೂ ಇಲಾಖೆ ನಿರ್ದೇಶಕ ಎಸ್.ಎಸ್.ಬಗಲಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಶಿವಾನಂದ ಕಾಮಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಂಜುನಾಥ ಕಾಮಗೊಂಡ, ಅನಂತ ಜೈನ, ಮಹಾವೀರ ವರ್ಧಮಾನ, ರಮೇಶ ಗುತ್ತೆದಾರ, ಪ್ರಶಾಂತ ಕಾಳೆ, ಜಾವೇದ್ ಮೋಮಿನ, ಸಿದ್ರಾಮಪ್ಪ ದೇಸಾಯಿ, ಡಾ.ರಾಜಶೇಖರ ಸುರಪುರ, ಪ್ರದೀಪ ಧನಶೆಟ್ಟಿ, ಎಚ್.ಎಂ.ಬಿಳವಾರ, ವಿಜಯಕುಮಾರ ಜಾಧವ, ಎ.ಎಸ್.ಲಾಳಸೇರಿ, ಡಿ.ಆರ್.ಮಠಪತಿ, ಶಂಕರ ಚವ್ಹಾಣ, ತುಕಾರಾಮ ಹೊಸಮನಿ ಇತರರಿದ್ದರು.