ಕೋಟ: ಸಂಟನೆಗಳು ಕ್ರಿಯಾಶೀಲವಾಗಿರುವ ಜತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಗಾಣಿಗ ಸವಾಜದ ರುರಾಮ ಬೈಕಾಡಿ ಹೇಳಿದರು. ಸಾಸ್ತಾನದಲ್ಲಿ ಭಾನುವಾರ ಕೋಟ ಗಾಣಿಗ ಯುವ ಸಂಟನೆ, ಮಹಿಳಾ ಸಂಟನೆ ಸಹಯೋಗದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಗಾಣಿಗ ಸವಾಜ ಬಾಂಧವರಿಗೆ ನಡೆದ ಸಾಂಸ್ಕೃತಿಕ ಸ್ಪರ್ಧೆ ಯುವ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.
ತೀರ್ಪುಗಾರ ಸಾಹೇಬರಕಟ್ಟೆಯ ಅಶೋಕ ಆಚಾರ್ಯ ವಾತನಾಡಿ, ಕಲೆ ಎನ್ನುವುದು ವ್ಯಕ್ತಿಯನ್ನು ಪರಿಶುದ್ಧಗೊಳಿಸುತ್ತದೆ. ಈ ಮೂಲಕ ಸವಾಜವೂ ಶುದ್ಧಗೊಳ್ಳುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಒಂದಿಷ್ಟು ಪ್ರತಿಭೆಗಳು ಹೊರಬರುತ್ತವೆ ಎಂದರು.
ಗಾಣಿಗ ಯುವ ಸಂಟನೆ ಅಧ್ಯಕ್ಷ ಗಿರೀಶ ಗಾಣಿಗ ಬೆಟ್ಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಸೋಮಕ್ಷತ್ರಿಯ ಗಾಣಿಗ ಸವಾಜ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಗಾಣಿಗ ಯುವ ಸಂಟನೆ ಕಾರ್ಯದರ್ಶಿ ರಾಧಾಕೃಷ್ಣ, ಕೋಶಾಧಿಕಾರಿ ಆನಂದ ಗಾಣಿಗ, ಉದ್ಯಮಿ ವಿಜಯ ಗಾಣಿಗ, ತೀರ್ಪುಗಾರ್ತಿ ನಾಗರತ್ನ ಹೇರ್ಳೆ, ಸಂಟನೆಯ ಶಶಿಧರ್, ಪ್ರಶಾಂತ ಗಾಣಿಗ ಕಾರ್ಕಡ, ಗಣೇಶ ಗಾಣಿಗ ಚಿತ್ರಪಾಡಿ ಇದ್ದರು. ಸಂಟನೆಯ ರಾಜೇಶ ಸ್ವಾಗತಿಸಿ, ವಂದಿಸಿದರು.