ನಿಪ್ಪಾಣಿ: ನಾನು ಸಚಿವೆಯಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ 350 ಶಾಲಾ ಕೊಠಡಿ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದ ಶಾಲಾ ಕೊಠಡಿಗಳ ನಿರ್ಮಾಣ ಈಗ ಪೂರ್ಣಗೊಂಡಿದ್ದು, ಅಭಿವೃದ್ಧಿ ಕಾರ್ಯಗಳ ಜತೆಗೆ ಶೈಕ್ಷಣಿಕ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಬೆನಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿಯನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಅನುಮೋದಿಸಿ ಪ್ರಾರಂಭಿಸಲಾಗಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿಯೂ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಅಂಗನವಾಡಿಗಳಲ್ಲಿ ಡಿಜಿಟಲ್‌ನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಹಾಲಶುಗರ್ ನಿರ್ದೇಶಕ ರಮೇಶ ಪಾಟೀಲ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆಯವರ ಪ್ರಯತ್ನದಿಂದ ಬೆನಾಡಿಯಲ್ಲಿ 7 ಶಾಲಾ ಕೊಠಡಿಗಳ ನಿರ್ಮಾಣಗೊಂಡಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಗ್ರಾಪಂ ಅಧ್ಯಕ್ಷ ಸತ್ತೆಪ್ಪ ಹಜಾರೆ, ಅಶೋಕ ಕ್ಷೀರಸಾಗರ, ಪಾಂಡು ಪಾಟೀಲ, ಶಿವಗೊಂಡ ಜಕಣ್ಣವರ, ಅರುಣ ಜಾವೀರ, ರಾವಸಾಹೇಬ ಜನವಾಡೆ, ವಿರೂಪಾಕ್ಷ ಖೇಮಣ್ಣವರ, ರಾಜು ಚಂದೂರೆ, ಅನಿಲ ಜಿರಗೆ, ಜಕ್ಕಪ್ಪ ಹಜಾರೆ, ಶಿವ ಪನ್ನೂರೆ, ರಾಜು ದಿವಟೆ, ಅಪ್ಪಾಸಾಹೇಬ ಸಾಂಗಾವೆ, ಶೇಖರ ಕ್ಷೀರಸಾಗರ, ಭೀಮಾ ಚೌಗುಲೆ, ಸಾವಿತ್ರಿ ತಂಗಡೆ, ಸದಾಶಿವ ಜನವಾಡೆ, ಪಿಡಿಒ ಮಾಳಪ್ಪ ದತ್ತವಾಡೆ, ಕಾರ್ಯದರ್ಶಿ ಶಿವಾನಂದ ಹೊಸಮನಿ ಇತರರಿದ್ದರು.