ಜಿಲ್ಲೆ

8ನೇ ವಾರ್ಡ್​ನಲ್ಲಿ ಆಗಬೇಕಿದೆ ಇನ್ನಷ್ಟು ಅಭಿವೃದ್ಧಿ ಕಾರ್ಯ

ಗಂಗಾಧರ ಬಿ ವಿ

* ಗುಡಿ ಕೈಗಾರಿಕೆಗೆ ಸರ್ಕಾರದಿಂದ ಪ್ರೋತ್ಸಾಹ ಅಗತ್ಯ

* ಶುದ್ದಕುಡಿಯುವ ನೀರಿನ ಟಕಕ್ಕೆ ಬೇಡಿಕೆ

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ಪಟ್ಟಣದ 23 ವಾರ್ಡ್​ಗಳಲ್ಲಿ ಪ್ರಮುಖ ವಾರ್ಡ್​ ಹೊಸಪೇಟೆಯ 8ನೇ ವಾರ್ಡ್​ ಆಗಿದ್ದು, ಸಾಕಷ್ಟು ಅಭಿವೃದ್ಧಿಯಾದರೂ ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ.

ಹೌದು.. ಈ ವಾರ್ಡ್​ನಲಿ ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಕಂಡರೂ, ಇಲ್ಲಿ ಒಂದು ಸುತ್ತು ಬಂದರೆ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುದು ಕಂಡುಬರುತ್ತದೆ.

ಮಾಜಿ ಸಚಿವ ಎಚ್​.ಎಂ. ರೇವಣ್ಣ ವಿದ್ಯಾಭ್ಯಾಸ ಮಾಡಿದ ಶಾಲೆ ಈ ವಾರ್ಡ್​ನಲ್ಲಿದೆ. ವಾರ್ಡ್​ನಲ್ಲಿನ 100ಕ್ಕೂ ಹೆಚ್ಚು ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದು, ಮತ್ತಷ್ಟು ಮಂದಿ ಹಲವು ವಿಷಯಗಳಲ್ಲಿ ಪಿಎಚ್​. ಡಿ ಮಾಡಿದ್ದು, ಬಹುತೇಕ ಮಂದಿ ಬೆಂಗಳೂರು ಸೇರಿ ಇತರೆಡೆ ವಾಸಿಸುತ್ತಿದ್ದಾರೆ.

ವಾರ್ಡ್​ನಲ್ಲಿನ 150ಕ್ಕೂ ಹೆಚ್ಚು ಮಂದಿಗೆ ನಿವೇಶನ, ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲೇ ವಾಸವಿದ್ದು, ನಿವೇಶನಕ್ಕೆ ಅರ್ಜಿ ಸಲ್ಲಿಸಿದರೂ ಪುರಸಭೆ, ತಾಲೂಕು ಆಡಳಿತ ನಿವೇಶನ ಹಂಚಿಕೆ ಮಾಡಲು ಮುಂದಾಗಿಲ್ಲ.

ಗಣಪತಿ ರಸ್ತೆ, ಹೊಸಪೇಟೆ ಮುಖ್ಯರಸ್ತೆ, ಬಿಕೆ.ರಸ್ತೆ, ಮೇದರ ಬೀದಿ, ಬಿಸಿಲು ಮಾರಮ್ಮ ದೇವಾಲಯ ರಸ್ತೆ, ರಾಮಮಂದಿರ ರಸ್ತೆ, ಹೊಂಬಮ್ಮ ಗಲ್ಲಿ, ಕೊಡಯ್ಯನ ಗಲ್ಲಿ, ಜವರಪ್ಪ ಗಲ್ಲಿ, ಬೆಸ್ತರ ಬೀದಿ ರಸ್ತೆಗಳು 8ನೇ ವಾರ್ಡ್​ ವ್ಯಾಪ್ತಿಗೆ ಸೇರಿವೆ.

ವಾರ್ಡ್​ನಲ್ಲಿ 1500 ಜನಸಂಖ್ಯೆ ಇದ್ದು, 1035 ಮಂದಿ ಮತದಾರರನ್ನು ಹೊಂದಿದೆ, ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು, ಆಟೋ, ಕಾರು ಡ್ರೆವರ್​, ಗಾರ್ಮೆಟ್ಸ್​ ಉದ್ಯೋಗಿಗಳು, ಬಿದಿರಿನ ಮಂಕರಿ, ಏಣಿ, ಬಾಗಿನ ಮರಗಳನ್ನು ತಯಾರಿಸುವರು ಹೀಗೆ ಕೂಲಿ ಕಾರ್ಮಿಕರೆ ಹೆಚ್ಚಿದ್ದು, ಪ್ರತಿ ನಿತ್ಯ ದುಡಿದು ತಂದರೆ ಮಾತ್ರ ಜೀವನದ ಬಂಡಿ ಸಾಗಲು ಸಾಧ್ಯ. ಇಂತಹವರನ್ನು ಗುರುತಿಸಿ ಸ್ಥಳಿಯವಾಗಿ ಉದ್ಯೋಗ ಕಲ್ಪಿಸಲು ಗುಡಿ ಕೈಗಾರಿಕೆ ಪ್ರಾರಂಭಿಸಲು ಸರ್ಕಾರ ಮುಂದಾಗಿಲ್ಲ. ವಾರ್ಡ್​ನಲ್ಲಿ ಗಣಪತಿ ದೇವಾಲಯ, ರಾಮಮಂದಿರ, ಬಿಸಿಲು ಮಾರಮ್ಮ ದೇವಾಲಯ, ಮಸೀದಿ ಇವೆ.

ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಬಿಸಿಲು ಮಾರಮ್ಮ ಜಾತ್ರೆಯ ವೇಳೆ ದೇವರನ್ನು ಕೂರಿಸಲು ವಾರ್ಡ್​ನಲ್ಲಿ ಸುಂದರವಾದ ವೇದಿಕೆ ನಿರ್ಮಿಸಿ, ಹೈಮಾಸ್ಟ್​ ಲೈಟ್​ ಅಳವಡಿಸಲಾಗಿದ್ದು ಲೋಕಾರ್ಪಣೆ ಬಾಕಿ ಉಳಿದಿದೆ.

ಕೆಲ ಬೀದಿಗಳಿಗೆ ಸಿಹಿ ನೀರು ಸರಬರಾಜು ಇಲ್ಲದೆ ಉಪ್ಪು ನೀರನ್ನೇ ಕುಡಿಯುತ್ತಿದ್ದಾರೆ.

ಆಗಬೇಕಿರುವ ಕೆಲಸಗಳು!

ಶುದ್ದಕುಡಿಯುವ ನೀರಿನ ಟಕ

ಅಂಗನವಾಡಿ ಕಟ್ಟಡ

ಉದ್ಯಾನವನ ನಿರ್ಮಾಣ

ಹಕ್ಕು ಪತ್ರಗಳ ವಿತರಣೆ

ಹೊಸ ಮನೆಗಳ ನಿರ್ಮಾಣ

ವಾರ್ಡ್​ಗೆ ಯಾವ ರೀತಿ ಕಾಯಕಲ್ಪ ನೀಡಬೇಕು. ಆ ರೀತಿ ಸದಸ್ಯೆ ಆಶಾ ಪ್ರವಿಣ್​ ಮಾಡಿದ್ದಾರೆ, ವಾರ್ಡ್​ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿ ಮಾದರಿ ವಾರ್ಡ್​ ಮಾಡಿದ್ದಾರೆ.

> ಮಹದೇವಯ್ಯ, ಸ್ಥಳಿಯ ನಿವಾಸಿ

ಸದಸ್ಯೆಯಾದ ನಂತರ ವಾರ್ಡ್​ನಲ್ಲಿ 30 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗಿದೆ. ಬಡವರಿಗೆ ನಿವೇಶನ ಹಂಚಿಕೆ ಅಗತ್ಯವಾಗಿದೆ. ವಾರ್ಡ್​ಗೂ ಮೀರಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ.

> ಆಶಾ ಪ್ರವಿಣ್​ ಪುರಸಭಾ ಸದಸ್ಯೆ.

ಪುರಸಭಾ ಸದಸ್ಯೆ 9980102819.