ಹೂವಿನಹಿಪ್ಪರಗಿ ಶಾಸಕ ರಾಜುಗೌಡರ ಸಹೋದರ ಸಚಿನ್‌ಗೌಡ ಪಾಟೀಲ ಸಿಸಿ ರಸ್ತೆಗೆ ಕಾಮಗಾರಿಗೆ ಚಾಲನೆ ನೀಡಿದರು. ಮುಖಂಡರಾದ ಮಹಾಂತೇಶ ಚಕ್ರವರ್ತಿ, ರಾಜಶೇಖರ ಹುಲ್ಲಳ್ಳಿ, ಸಿದ್ದಣ್ಣ್ಣ ಗೋನಾಳ, ನಿಲರಾಜ ಹಾಲಿಹಾಳ, ಡಾ. ಬಸವರಾಜ ಸಗರನಾಳ ಇತರರಿದ್ದರು. 
ಜಿಲ್ಲೆ

ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿ

Vijayapura - Desk - Gurappa Lokuri

ಹೂವಿನಹಿಪ್ಪರಗಿ: ಗ್ರಾಮದ ಮೇಲ್ವರ್ಗದ ಜನರಂತೆ ಪರಿಶಿಷ್ಟ ಜಾತಿ ಜನಾಂದವರ ಆರೋಗ್ಯ ಗಮನದಲ್ಲಿರಿಸಿ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡರ ಸಹೋದರ ಜೆಡಿಎಸ್ ಮುಖಂಡ ಸಚಿನ್‌ಗೌಡ ಪಾಟೀಲ ಕುದರಿ ಸಾಲವಾಡಗಿ ಚಾಲನೆ ನೀಡಿದರು.

ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಹಾಗೂ ಕಣಕಾಲ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ (ಪ್ರಗತಿ ಕಾಲನಿಯಲ್ಲಿ ) ತಲಾ ಗ್ರಾಮದಲ್ಲಿ ಸಿಸಿ ರಸ್ತೆ ನಿಮಾರ್ಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಸಹೋದರ ರಾಜುಗೌಡರು ವಿರೋಧ ಪಕ್ಷದ ಶಾಸಕರು. ಇಡೀ ರಾಜ್ಯದ ಜನತೆಗೆ ಗೊತ್ತಿರುವಂತೆ ಆಡಳಿತ ಪಕ್ಷದ ಶಾಸಕರಿಗೆ ತಕ್ಕ ಮಟ್ಟಿಗೆ ಅನುದಾನ ದೊರೆಯುತ್ತಿಲ್ಲ. ಇಂತ ಸ್ಥಿತಿಯಲ್ಲಿ ಶಾಸಕ ರಾಜುಗೌಡರು ಎಲ್ಲ ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಗುರಿ ಹೊಂದಲಾಗಿದೆ ಎಂದರು.

ಮುಖಂಡರಾದ ಮಹಾಂತೇಶ ಚಕ್ರವರ್ತಿ, ರಾಜಶೇಖರ ಹುಲ್ಲಳ್ಳಿ, ಸಿದ್ದಣ್ಣ್ಣ ಗೋನಾಳ, ನಿಲರಾಜ ಹಾಲಿಹಾಳ, ಡಾ. ಬಸವರಾಜ ಸಗರನಾಳ, ಗ್ರಾಪಂ ಅಧ್ಯಕ್ಷ ಅವ್ವಣ್ಣ ಬಿರಾದಾರ, ಭೀಮಣ್ಣ ಓದಿ, ಸುರೇಶ ಗೋನಾಳ, ವಿದ್ಯಾಧರ ದೊಡಮನಿ, ಪರಸುರಾಮ ಯಂಟಮನ, ಬಸಲಿಂಗಪ್ಪ ಕುಂಬಾರ, ಸಾಬಣ್ಣ ಯರಝರಿ, ದಸ್ತಪ್ಪ ದೊಡಮನಿ, ರವಿ ದೊಡಮನಿ, ಕಾಶಿನಾಥ ಸಜ್ಜನ, ಬಸಪ್ಪ ಅಂಗಡಿ, ಸಿದ್ದಲಿಂಗಯ್ಯ ಹಿರೇಮಠ, ಪಿಡಿಒ ಮಲ್ಲಣ್ಣ ಕೊಳೂರ, ರೇಣುಕಾ ಮಡಿವಾಳರ, ಬಾಬುಗೌಡ ಗುಡದಿನ್ನಿ, ವಿಶ್ವನಾಥ ಅಂಗಡಿ, ದುರ್ಗಪ್ಪ ಮಾದರ, ಬಾಸು ಚಪ್ಪರಬಂದ, ರಮೇಶ ಮಜ್ಜಗಿ, ಅಯ್ಯಪ್ಪ ದಿನ್ನಿ, ಸಂಗಯ್ಯ ವಸದ ಇತರರಿದ್ದರು.