ಜಿಲ್ಲೆ

ಹೆಚ್ಚು ಬಸ್ ಸಂಚಾರಕ್ಕೆ ಕ್ರಮವಹಿಸಿ

ಸಿಂಧನೂರು: ಬಳಗಾನೂರಿನಿಂದ ದಿದ್ದಿಗಿ ಪೋತ್ನಾಳ ಮಾರ್ಗವಾಗಿ ಸಿಂಧನೂರಿಗೆ ಬರಲು ಬಸ್‌ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ದಿದ್ದಿಗಿ, ರಾಮತ್ನಾಳ, ಬನ್ನಿಗನೂರು ಗ್ರಾಮದ ವಿದ್ಯಾರ್ಥಿಗಳು ನಗರದ ಬಸ್ ಡಿಪೋ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಡಿಪೋ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಸಂಚರಿಸುತ್ತಿರುವ ಬಸ್‌ಗಳು ಸಾಕಾಗುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಬಸ್‌ನಲ್ಲಿ ಜಾಗವಿಲ್ಲದೆ ರಾಮತ್ನಾಳ, ಬನ್ನಿಗನೂರು ಗ್ರಾಮದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗದಂತಾಗಿದೆ. ಬಳಗಾನೂರು ಮಾರ್ಗದಲ್ಲಿ ರಾಮತ್ನಾಳ, ದಿದ್ದಿಗಿ, ಬನ್ನಿಗನೂರು ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.