ಜಿಲ್ಲೆ

ಹಾನಗಲ್ಲ ಲೈಬ್ರರಿ ಸೇರಿದ ಇನ್ನಷ್ಟು ಪುಸ್ತಕ

ಬಸವರಾಜ ವೀರಪ್ಪ ಗರಗ

ಹಾನಗಲ್ಲ: ಪಟ್ಟಣದ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳ ಬೇಡಿಕೆಯನ್ನು ಶಾಸಕ ಶ್ರೀನಿವಾಸ ಮಾನೆ ಈಡೇರಿಸಿದ್ದು, ಸಾಮಾನ್ಯ ಜ್ಞಾನವೂ ಸೇರಿ ವಿವಿಧ ಪರೀಕ್ಷೆಗಳಿಗೆ ಅನುಕೂಲವಾಗುವ ಹಲವಾರು ಪುಸ್ತಕಗಳನ್ನು ಒದಗಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪುಸ್ತಕಗಳ ಕೊರತೆ ಇದೆ. ಮಹತ್ವದ ಹಲವಾರು ಪುಸ್ತಕಗಳು ಗ್ರಂಥಾಲಯದಲ್ಲಿ ಇಲ್ಲದ ಕಾರಣ ಪರೀಕ್ಷೆಗೆ ಸಜ್ಜುಗೊಳ್ಳಲು ಅನಾನುಕೂಲ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ಶಾಸಕರ ಗಮನ ಸೆಳೆದಿದ್ದರು. ಆ ಹಿನ್ನೆಲೆಯಲ್ಲಿ ಸ್ಪಂದಿಸಿದ ಶಾಸಕರು, ಸಂವಿಧಾನ, ವಿಜ್ಞಾನ-ತಂತ್ರಜ್ಞಾನ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಕಂಪ್ಯೂಟರ್, ಸಾಮಾನ್ಯ ಜ್ಞಾನ, ಭಾರತದ ರಾಜ್ಯಗಳು, ಮಾನಸಿಕ ಸಾಮರ್ಥ್ಯ ಸೇರಿ ಹಲವು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದಾರೆ.

ವಿದ್ಯಾರ್ಥಿಗಳಾದ ಸುನೀಲ ಜ್ಯೋತಿಬಾನವರ, ಕಿರಣ ಹಿರೇಕಣಗಿ, ಶಿವರಾಜ ಕುರುಬರ, ವೀರೇಶ ದೊಡ್ಡಮನಿ, ಮಂಜುನಾಥ ಬಾಳಂಬೀಡ, ಕೃಷ್ಣ ಶಿವಣ್ಣನವರ, ದಯಾನಂದ ಶಿಡ್ಲಾಪೂರ, ವಿಜಯಕುಮಾರ ಮಡಿವಾಳರ, ಇತರರು ಉಪಸ್ಥಿತರಿದ್ದರು.