ಜಿಲ್ಲೆ

ದುಡ್ಡು ಕೊಟ್ಟು ಆರೋಗ್ಯ ಸಂಪಾದಿಸಲು ಸಾಧ್ಯವಿಲ್ಲ

ಮೋರಟಗಿ: ವಿದ್ಯಾರ್ಥಿಗಳು ಓದಿಗೆ ಮಹತ್ವ ನೀಡಿದಷ್ಟು ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಚಡಚಣದ ಎಸ್.ಎಸ್. ಪಪೂ ಕಾಲೇಜಿನ ಉಪನ್ಯಾಸಕ ಮಹಿಬೂಬ್ ಭಾಷಾ ಭಾವಿಪಟೇಲ್ ಹೇಳಿದರು.
ಗ್ರಾಮದ ಕಲ್ಪವೃಕ್ಷ ವಿದ್ಯಾಸಂಸ್ಥೆಯ ಆಂಗ್ಲ, ಕನ್ನಡ ಮಾಧ್ಯಮ, ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಅಂಗವಾಗಿ ನಡೆದ ವಿವಿಧ ಕ್ರೀಡೆಗಳಲ್ಲಿ ವಿಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋಟಿ ಕೋಟಿ ದುಡ್ಡು ಸಂಪಾದಿಸಬಹುದು. ಆದರೆ, ದುಡ್ಡು ಕೊಟ್ಟು ಆರೋಗ್ಯ ಸಂಪಾದಿಸಲು ಸಾಧ್ಯವಿಲ್ಲ. ನಿಮ್ಮ ಆರೋಗ್ಯ ಸದೃಢವಿರಲು ನಿತ್ಯ ವ್ಯಾಯಾಮ, ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಲ್ಪವೃಕ್ಷ ವಿದ್ಯಾ ಸಂಸ್ಥೆ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮತ್ತು ಆಡಳಿತಾಧಿಕಾರಿ ಎಸ್.ಎಚ್. ದೂಳಬಾ ಮಾತನಾಡಿದರು. ಆಟೋಟಗಳಲ್ಲಿ ವಿಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಎಸ್.ಬಿ. ಬಿರಾದಾರ, ವಿ.ಎಂ. ಲಂಗೋಟಿ, ಎಸ್.ಬಿ. ಪಿಳಬಂಟಿ, ಎಂ.ವಿ. ಗುತ್ತರಗಿ, ಎಸ್.ಬಿ. ಶಿರಕನಳ್ಳಿ, ಭುವನೇಶ್ವರಿ ಭಾರತಿ, ರಮ್ಯಾ ತಮಗೊಂಡ, ಲೀನಾ ಹರದರ, ರುದ್ರಗೌಡ ಪಾಟೀಲ ಮತ್ತಿತರರಿದ್ದರು.