ಜಿಲ್ಲೆ

ಶಿಕ್ಷಕರಿಗೆ ನೈತಿಕತೆ ಮುಖ್ಯವಾಗಲಿ

ಇಂದಿರಾ ಎನ್ ಕೆ

ಹೆಬ್ರಿ: ಶಿಕ್ಷಕನಾದವನು ನೈತಿಕವಾಗಿ ಸರಿ ಇರಬೇಕು. ಶಿಕ್ಷಣ ವೃತ್ತಿ ಎಂಬುದು ಪುಣ್ಯದ ವೃತ್ತಿಯಾಗಿದ್ದು ಕರ್ತವ್ಯ ಲೋಪ ಮಾಡಬಾರದು. ಗುರುವಿಗೆ ತನ್ನ ಶಿಷ್ಯ ತನಗಿಂತ ಉನ್ನತ ಸ್ಥಾನಕ್ಕೇರಿದಾಗ ಸಂತೋಷವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ದಿನೇಶ್‌ಕುವಾರ್ ಪಿ. ಹೇಳಿದರು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಬ್ರಿ ಶಾಂತಿನಿಕೇತನ ಮತ್ತು ಶ್ರೀ ರಾವೇಂದ್ರ ಚಾರಿಟೆಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಶಾಂತಿನಿಕೇತನ ಪ್ರೇರಣಾ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ವಾತನಾಡಿದರು.

ಉದ್ಯಮಿ ಎಚ್.ಯೋಗೇಶ್ ಭಟ್ ವಾತನಾಡಿ, ಪ್ರತಿಯೊಬ್ಬ ಶಿಕ್ಷಕರೂ ಕೇವಲ ಪಠ್ಯಕ್ಕೆ ಅಂಟಿಕೊಳ್ಳದೆ ಸವಾಜದ ಬದಲಾವಣೆಗೆ ವಿದ್ಯಾರ್ಥಿಗಳ ಮೂಲಕ ಏನು ಕೊಡುಗೆ ನೀಡಿದ್ದೇನೆ ಎಂಬುದನ್ನು ಆತ್ಮಾವಲೋಕನ ವಾಡಿಕೊಳ್ಳಬೇಕು ಎಂದರು.

ರಾವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್ ಮಾತನಾಡಿದರು. ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂ ಅಧ್ಯಕ್ಷ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ದಿವಾಕರ ಮರಕಾಲ ಲಕ್ಕಿ ಶಿಕ್ಷಕರಾಗಿ ಆಯ್ಕೆಯಾದರೂ. ಶಾಂತಿನಿಕೇತನ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ವಿಜಯಕುವಾರ್ ಜೆ.ಪಿ., ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂ ಅಧ್ಯಕ್ಷ ರಾಜೇಶ್, ಆಡಳಿತ ಮಂಡಳಿ ಸದಸ್ಯ ಪ್ರಸನ್ನ, ಕೆ.ಗಣೇಶ್, ಉಪನ್ಯಾಸಕ ಕೃಷ್ಣ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜೇಶ್ ಸ್ವಾಗತಿಸಿದರು. ನರೇಂದ್ರ ಎಸ್.ಮರಸಣಿಗೆ ನಿರೂಪಿಸಿ, ವಂದಿಸಿದರು.