ಚಿಕ್ಕಮಗಳೂರು: ಪ್ರಸ್ತುತ ನೀಡಲಾಗುತ್ತಿರುವ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಾಕ್ಷರಿ ಅಭಿಪ್ರಾಯಪಟ್ಟರು.
ನಗರದ ಜೆವಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟ್ ಒಂದು ಚಿಕ್ಕ ಸಂಸ್ಥೆಯಾಗಿ ಪ್ರಾರಂಭವಾಯಿತು. ಓರ್ವ ಮಾಜಿ ಸೈನಿಕ ಇದನ್ನು ಸ್ಥಾಪಿಸಿದರು. ಇದರ ಉz್ದೆÃಶ ಸಾಮಾಜಿ ಜೀವನದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು ಎಂಬುದೇ ಆಗಿದೆ ಎಂದರು.
ಪ್ರಸ್ತುತ ಕೇವಲ ಪದವಿ ಪಡೆದವರು ನಿರುದ್ಯೋಗಿಗಳಾಗುತ್ತಾರೆ. ಆವರು ಬರೀ ಪರೀಕ್ಷೆಗೋಸ್ಕರ ಪುಸ್ತಕದಲ್ಲಿ ಇರುವುದನ್ನು ಅಧ್ಯಯನ ಮಾಡಿರುತ್ತಾರೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರೇ ವಿಶ್ಲೇಷಿಸಿದ್ದಾರೆ. ಜೊತೆಗೆ ಹೀಗೆ ಪದವಿ ಪಡೆದವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ ಎಂದು ವಿಷಾಧಿಸಿದರು.
ವಿದ್ಯಾರ್ಥಿಗಳಿಗೆ ದೇಶದ ಇತಿಹಾಸ, ಮಣ್ಣಿನ ಮಹತ್ವ ತಿಳಿಸುತ್ತಿಲ್ಲ, ಸಣ್ಣ ಸಣ್ಣ ವಿಷಯಗಳು ಸಂಕುಚಿತದಿAದಾಗಿ ಸ್ವಾರ್ಥ ಹೆಚ್ಚಾಗಿ ಜಗತ್ತಿನಲ್ಲಿ ಒಬ್ಬರಿಗೊಬ್ಬರಿಗೆ ದ್ವೇಷ, ಅಸೂಯೆಯಿಂದ ಬದುಕುತ್ತಿದ್ದಾರೆ. ಇವುಗಳನ್ನು ತೊಡೆದುಹಾಕಬೇಕಾದರೆ ಚಿಕ್ಕಂದಿನಿAದಲೇ ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಸ್ಕೌಟ್‌ನಲ್ಲಿ ಒಂದು ನಿಯಮವಿದೆ. ದಿನಕ್ಕೊಂದು ಒಳ್ಳೆಯ ಕೆಲಸ ಮಾಡು ಎಂದು ತಿಳಿಸಿದರು.
ದಾರಿಯಲ್ಲಿ ಯಾವುದೋ ಒಂದು ವಸ್ತು ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಎತ್ತಿ ಹಾಕುವುದು, ಸರಿ ಇಲ್ಲದ್ದನ್ನು ಸರಿಪಡಿಸುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ ಸಮವಸ್ತç ಧರಿಸಿದ ಮೇಲೆ ಬೇರೆಯವರಿಗಿಂತ ವಿಭಿನ್ನವಾಗಿರಬೇಕು ಎಂದರು.
ಉದಾತ್ತ ಧ್ಯೇಯಗಳಿಂದ ಈ ಸಮಾಜದಲ್ಲಿ ಎಷ್ಟರಮಟ್ಟಿಗೆ ಉಪಯೋಗಿಸಿ ಸಮಾಜ ಪರಿವರ್ತನೆಯಲ್ಲಿ ಹೇಗೆ ಬದುಕಬೇಕೆಂಬುದು ಸಾಧ್ಯ ಎಂಬುದರ ಬಗ್ಗೆ ಪಾಲಕರಲ್ಲಿ ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡಿಕೊಳ್ಳಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ವಹಿಸಿದ್ದರು. ಶಾಲೆಯ ಜಂಟಿ ಕಾರ್ಯದರ್ಶಿ ಕೆ.ಕೆ ಮನುಕುಮಾರ್, ಸ್ಕೌಟ್ಸ್ ಸಂಸ್ಥೆಯ ಕಿರಣ್ ಕುಮಾರ್, ಮುಖ್ಯೋಪಾಧ್ಯಾಯ ವಿಜಿತ್, ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮತ್ತಿತರರು ಉಪಸ್ಥಿತರಿದ್ದರು.