ಇಳಕಲ್ಲ ತಾಲೂಕಿನ ನಂದವಾಡಗಿ ಗ್ರಾಮದ ಎಬಿಟಿ ಗುರುಕುಲ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಮಾತನಾಡಿದರು. ಮಹಾಂತಲಿಂಗ ಶಿವಾಚಾರ್ಯರು, ಸರಸ್ವತಿ ಈಟಿ, ಸಿ.ಎಸ್. ಪಾಟೀಲ, ಎಸ್.ಎಸ್. ಮೇರಾಖೋರ ಮತ್ತಿತರರಿದ್ದಾರೆ. 
ಜಿಲ್ಲೆ

ಉತ್ತಮ ಪ್ರಜೆಯಾಗಲು ನೈತಿಕ ಮೌಲ್ಯ ಅವಶ್ಯ

ವಿನಯ ಆಶೋಕ ನಾಯ್ಕ

ಇಳಕಲ್ಲ(ಗ್ರಾ ): ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ನಂದವಾಡಗಿ ಮಠದ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.

ತಾಲೂಕಿನ ನಂದವಾಡಗಿ ಗ್ರಾಮದ ಎಬಿಟಿ ಗುರುಕುಲ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಶಾಮಿದಾಬಿ ಗುಡಿಹಾಳ, ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸರಸ್ವತಿ ಈಟಿ, ಗುತ್ತಿಗೆದಾರರ ಸಿ.ಎಸ್. ಪಾಟೀಲ, ಎಸ್.ಎಸ್. ಮೇರಾಖೋರ ಮತ್ತಿತರರಿದ್ದರು.