ವಿಜಯವಾಣಿ ಸುದ್ದಿಜಾಲ ಧಾರವಾಡ
ಮಗು ಶಾಲೆಯಲ್ಲಿ ಪಡೆದ ಶಿಕ್ಷಣ ನಿಜವಾದ ಶಿಕ್ಷಣವಾಗಲಾರದು. ವ್ಯಕ್ತಿಯನ್ನು ಪರಿವರ್ತನೆ ಮಾಡುವುದೇ ಶಿಣ. ನೈತಿಕತೆ ಕಲಿಸದ ಶಿಣ ಶಿಣವೇ ಅಲ್ಲ ಎಂದು ಕರ್ನಾಟಕ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದಶಿರ್ ಜಿ.ಸಿ. ತಲ್ಲೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ದಿ. ಎಸ್.ಜಿ. ನಾಡಗೀರ ಸ್ಮರಣಾರ್ಥ ದತ್ತಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾರತೀಯ ಶಿಣ ಹಾಗೂ ನೈತಿಕತೆ ಕುರಿತು ಉಪನ್ಯಾಸ ನೀಡಿದರು.
ಶಿಣ ಮತ್ತು ನೈತಿಕತೆ ಒಂದಕ್ಕೊಂದು ಹಾಸುಹೊಕ್ಕಾಗಿ ಇರುವಂತಹವು. ಆದರೆ ಎರಡೂ ಬೇರೆ ಬೇರೆ ದಾರಿಯ ಹಿಡಿದ ಕಾರಣ ಎರಡಕ್ಕೂ ಅಸ್ತಿತ್ವ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಸತ್ಯವನ್ನು ಬಿಡಬಾರದು. ಧರ್ಮ ಮಾರ್ಗದಲ್ಲಿ ನಡೆಯಬೇಕು. ವಿನಯವಂತಿಕೆಯಿಂದ ಇರಬೇಕು. ಇವು ಆದರ್ಶ ವ್ಯಕ್ತಿಯ ಆದರ್ಶ ಮೌಲ್ಯಗಳಾಗಿವೆ ಎಂದರು.
ಅಧ್ಯತೆ ವಹಿಸಿದ್ದ ಅರುಣ ನಾಡಗೀರ ಮಾತನಾಡಿ, ಒಂದು ಕಾಲದಲ್ಲಿದ್ದ ಆದರ್ಶ, ಮೌಲ್ಯಗಳು ಇಂದಿನ ಕಾಲ ಟ್ಟದಲ್ಲಿ ಇಲ್ಲದಾಗಿರುವುದು ದುರಂತದ ಸಂಗತಿ. ಒಂದು ಕಾಲ ಟ್ಟದಲ್ಲಿ ಜನರಲ್ಲಿ ಮೌಲ್ಯಗಳೇ ಆದರ್ಶವಾಗಿದ್ದವು. ಆ ನಿಟ್ಟಿನಲ್ಲಿ ಜನರ ವಿಶ್ವಾಸ, ಪ್ರೀತಿಗೆ ಪಾತ್ರರಾಗಿರುತ್ತಿದ್ದರು. ಇಂದು ಮೌಲ್ಯಗಳ ಕೊರತೆ ಎದ್ದು ಕಾಣುತ್ತಿರುವುದು ಖೇದಕರ ಸಂಗತಿ ಎಂದರು.
ಶಿವಾನಂದ ಭಾವಿಕಟ್ಟಿ, ಶಾಮಸುಂದರ ಬಿದರಕುಂದಿ, ಹರ್ಷ ಡಂಬಳ, ನಿಂಗಣ್ಣ ಕುಂಟಿ, ಶಶಿಧರ ತೋಡಕರ, ಎಂ.ಎಂ. ಚಿಕ್ಕಮಠ, ಡಾ. ಗುರುನಾಥ ಹೂಗಾರ, ಮೋಹನ ಸಿದ್ಧಾಂತಿ, ಎಂ.ಎಸ್. ನರೇಗಲ್, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.
ವೀರಣ್ಣ ಒಡ್ಡೀನ ವಂದಿಸಿದರು.