ಜಿಲ್ಲೆ

ಮಂಗಳೂರು ಅನೈತಿಕ ಪೊಲೀಸ್‌ಗಿರಿ ಇಬ್ಬರ ಬಂಧನ

ಮಂಗಳೂರು: ನಗರದಲ್ಲಿ ಒಂದೇ ಕಡೆ ಉದ್ಯೋಗದಲ್ಲಿದ್ದ ಅನ್ಯಕೋಮಿನ ಯುವಕ ಹಾಗೂ ಯುವತಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅನೈತಿಕ ಪೊಲೀಸ್‌ಗಿರಿ ನಡೆಸಿದ ಹಿಂದು ಸಂಘಟನೆಯ ಇಬ್ಬರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಅಕ್ಷಯ್ ಮತ್ತು ಶಿಬಿನ್ ಬಂಧಿತರು.


ಪಾಂಡೇಶ್ವರ ನಿವಾಸಿಯಾದ ಯುವಕ ಮತ್ತು ಯುವತಿ ಮುಳಿಹಿತ್ಲುವಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇವರು ಮೊಬೈಲ್ ರಿಪೇರಿ ಮಾಡಿಸಿಕೊಂಡು ಸೋಮವಾರ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೋರ್ಗನ್ಸ್‌ಗೇಟ್‌ನ ಮಂಕಿಸ್ಟಾೃಂಡ್ ಬಳಿ ಬೈಕ್‌ನಲ್ಲಿ ಬಂದವರು ಅಡ್ಡಗಟ್ಟಿದ್ದಾರೆ. ಬಳಿಕ ಯುವಕ, ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಎರಡೂ ಕೋಮಿನ ಯುವಕರು ಜಮಾಯಿಸಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆದಿದೆ. ಅಷ್ಟರಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.