ಗುಳೇದಗುಡ್ಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಗ್ರಾಮದೇವತೆ ಶ್ರೀ ಮೂಕೇಶ್ವರಿ ದೇವಿಯ ದೇವಸ್ಥಾನ ಕಾಮಗಾರಿಯನ್ನು ಮುಖಂಡ ಹೊಳಬಸು ಶೆಟ್ಟರ, ಊರಿನ ಮುಖಂಡರು ವೀಕ್ಷಿಸಿದರು. 
ಜಿಲ್ಲೆ

ಮೂಕೇಶ್ವರಿ ದೇವಸ್ಥಾನ ಕಾಮಗಾರಿ ವರ್ಷದಲ್ಲಿ ಪೂರ್ಣ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ : ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಗ್ರಾಮ ದೇವತೆಯಾಗಿರುವ ಶ್ರೀ ಮೂಕೇಶ್ವರಿ ದೇವಿಯ ದೇವಸ್ಥಾನ ಕಾಮಗಾರಿಯನ್ನು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಸೇರಿ ಊರಿನ ಮುಖಂಡರು ವೀಕ್ಷಿಸಿದರು.

ಹೊಳಬಸು ಶೆಟ್ಟರ ಮಾತನಾಡಿ, ಮೂಕೇಶ್ವರಿ ದೇವಿ ದೇವಸ್ಥಾನವನ್ನು ಜಿಲ್ಲೆಯಲ್ಲಿಯೇ ಒಂದು ಮಾದರಿ ಹಾಗೂ ಅತ್ಯಂತ ಸುಂದರವಾದ ದೇವಸ್ಥಾನವನ್ನಾಗಿ ನಿರ್ಮಿಸುವ ಉದ್ದೇಶವನ್ನು ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಊರಿನ ಎಲ್ಲ ಮುಖಂಡರು ಹೊಂದಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇವಿ ದೇವಸ್ಥಾನ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ದೇವಸ್ಥಾನದ ನಿರ್ಮಾನಕ್ಕೆ ಒಟ್ಟು 6-7 ಕೋಟಿಯಷ್ಟು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ದೇವಸ್ಥಾನ, ಮಹಾದ್ವಾರ, ದೇವಸ್ಥಾನದ ಒಳಗಡೆ ಸುತ್ತಲು ಭಕ್ತರು ಕುಳಿತುಕೊಳ್ಳು ಪೌಳಿ, ದೇವಸ್ಥಾನಕ್ಕೆ ಹತ್ತಿ ಬರಲು ಮೆಟ್ಟಿಲು ನಿರ್ಮಾಣ ಕಾರ್ಯ ಬಾಕಿಯಿದ್ದು, ವರ್ಷವೆನ್ನುಷ್ಟರಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇವೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮೂಕೇಶ್ವರಿ ದೇವಿಯ ನೂತನ ಮೂರ್ತಿ ಕೆತ್ತನೆಗೆ ಕೊಡಲಾಗಿದೆ ಎಂದು ಹೇಳಿದರು.

ಚಂದ್ರಕಾಂತ ಶೇಖಾ, ಪ್ರಶಾಂತ ಜವಳಿ, ಈರಣ್ಣ ಬಂಡಿವಡ್ಡರ, ಸಂಗಪ್ಪ ಹಡಪದ, ಶ್ಯಾಮ ಮೇಡಿ ಇತರರು ಇದ್ದರು.