ರಾಯಚೂರು ರಾಯಚೂರು ಕೃಷಿ ವಿವಿಯಲ್ಲಿ 7300 ಕ್ವಿಂಟಲ್ ಬೀಜ ಉತ್ಪಾದನೆ ಮಾಡುವ ಜತಗೆ ಉತ್ತಮ ಬೀಜೋತ್ಪಾದನೆ ಮಾಡುವ ಕೃಷಿ ವಿವಿಯಾಗಿದೆ. ರಾಜ್ಯದಲ್ಲಿಯೇ ಮೊದಲು ಎಂದು ಹೆಗ್ಗಳಿಕೆ ಗಳಿಸಿದೆಂದು ವಿವಿಯ ಕುಲಪತಿ ಡಾ. ಎಂ. ಹನುಮಂತಪ್ಪ ಹೇಳಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಖಿಲ ಭಾರತ ಸಂಯೋಜಿತ ಬೀಜ ಸಂಶೋಧನಾ ಯೋಜನೆ, ಬೀಜ ಘಟಕ ವತಿಯಿಂದ ಭಾನುವಾರ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀಜೋತ್ಪಾದನೆಗೆ ರೈತರು ಉತ್ತಮ ಗುಣಮಟ್ಟದ ಬೀಜ ಉತ್ಪಾದನೆ ಮಾಡಿದ್ದರಿಂದ ರೈತರಿಗೆ ಉತ್ತಮ ಬೆಳೆಯಲು ಸಾಧ್ಯವಾಗಿದ್ದು, ಗುಣಮಟ್ಟದ ಬೀಜ ಉತ್ಪಾದನೆಯಿಂದಾಗಿ ರಾಜ್ಯದಲ್ಲಿಯೇ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೃಷಿ ವಿವಿ ಜೀಜ ಘಟಕ ಸಾಧನೆ ಮಾಡಿದೆ. ರೈತರಿಗೆ ಗುಣಮಟ್ಟದ ಬೀಜವನ್ನು ಒದಗಿಸಿ ಕೊಡುವ ಮೂಲಕ ರೈತರಿಗೆ ಮಾದರಿಯಾಗಿದೆ ಎಂದರು.
ಪ್ರಾಸ್ತಾಕವಾಗಿ ವಿಶೇಷಾಧಿಕಾರಿ ಅರುಣಕು ಮಾರ ಹೊಸಮನಿ ಮಾತನಾಡಿ, ಬೀಜದಿನೋತ್ಸವ ಶತದಿನೋತ್ಸವ ಆಗಿದೆ, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಾಡಲಾಗುತ್ತದೆ. ಕೃಷಿ ವಿವಿ ರಾಜ್ಯದಲ್ಲಿ ಮುಂಚೋಣಿಯಲ್ಲಿದೆ ತೊಗರಿ, ಹೆಸರು, ಉದ್ದು, ಸೇರಿ ಮುಂಗಾರು ಬಿತ್ತನೆ ಬೀಜಗಳು ಉತ್ಪಾದನೆ ಮಾಡಲಾಗುತ್ತದೆ, ಬೀಜ ಬೆಳೆಗಾರರ ಸಂಘದಲ್ಲಿ 170 ಅಧಿಕ ರೈತರು ನೊಂದಣಿ ಮಾಡಿದ್ದಾರೆ, 350 ಕ್ವಿಂಟಲ್ ಬೀಜ ಉತ್ಪಾದನೆ, ತೊಗರಿ 3 ತಳಿ, 3500 ಕ್ವಿಂಟಲ್ ದಾಸ್ತಾನು ಮಾಡಿದೆ, ರೈತರಿಗೆ ಗುಣಮಟ್ಟದ ಬೀಜ ತಲುಪಿಸಲು ಶ್ರಮಿಸುತ್ತಿದೆ ಎಂದರು.
ಬೀಜ ದಿನದ ಮೂಲಕ ರೈತರಿಗೆ ಉತ್ತೇಜನ ನೀಡಲಾಗುತ್ತದೆ, 500 ಕ್ವಿಂಟಲ್ ಹೆಸರು, ಉದ್ದು ಸೂರ್ಯಕಾಂತಿ 40 ಕ್ವಿಂಟಲ್ ದಾಸ್ತಾನು ಮಾಡಿದೆ, ಶೇಂಗಾ, ಹತ್ತಿ, ಸೋಯಾ, ಬೀಜ ಉತ್ಪಾದನೆ ಮಾಡಲಾಗಿದೆ. ರೈತರು ಬಳಸಿ ಆದಾಯ ದ್ವಿಗುಣಗೊಳಿಸಬೇಕು ಎಂದರು.
ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಮುಂಗಾರು ಬೀಜ ದಿನೋತ್ಸವ ಉದ್ಘಾಟನೆ ಕಾರ್ಯಕ್ರಮ ಉದ್ಘಾಟನೆ ವೇಳೆ ಮಳೆ ಅಡ್ಡಿಯಾಗಿರುವುದರಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿ, ಅಧಿಕಾರಿಗಳು ಮಾತನಾಡಿದರು, ಬಳಿಕ ರೈತರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ವಿವಿ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲೇಶ ಕೊಲುಮಿ, ಮಲ್ಲಿಕಾರ್ಜುನ ಡಿ, ಮಧುಸೂದನ್ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚವಡಿ, ಡಾ.ನಾರಾಯಣ ರಾವ್ ಕೆ. ಕುಲಸಚಿವ ಡಾ.ಕೆಆರ್.ದುರುಗೇಶ, ವಿಸ್ತರ್ಣಾ ನಿರ್ದೇಶಕ ಡಾ.ಶಿವಶಂಕರ ಎನ್, ಸಹ ವಿಸ್ತೀರ್ಣ ನಿರ್ದೇಶಕ ಡಾ.ಎ.ಆರ್. ಕುರುಬರ್, ಬೀಜ ಬೆಳೆಗಾರ ಎಸ್.ಎಂ. ಸಿದ್ದಾರೆಡ್ಡಿ, ಉಪ ನಿರ್ದೇಶಕ ಶರಣ ಬಸಪ್ಪ, ರಾಜ್ಯ ಬೀಜ ನಿಗಮದ ಉಪ ವ್ಯವಸ್ಥಾಪಕ ಪ್ರಭು ತುರಾಯಿ, ಐಸ್ಯಾಫ್ ನವದೆಹಲಿ ಗೋವಿಂದ ರಾಜ್, ಡಾ.ಅಮರೇಗೌಡ ಎ ಸೇರಿದಂತೆ ರೈತರು ಅಧಿಕಾರಿಗಳು ಇದ್ದರು.