ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ ಮೀನುಗಾರಿಕೆ ಮೇಲೆ ಪರಿಣಾಮ ಬೀರಿದೆ. ಕಳೆದ ವರ್ಷ ಅತಿಯಾದ ಮಳೆಯಿಂದ ಬಹುತೇಕ ಕೆರೆಗಳು ತುಂಬಿ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿತ್ತು.
ಆದರೆ, ಈ ಬಾರಿ ನಿರೀಕ್ಷೆಗಳನ್ನು ಹುಸಿಗೊಳಿಸಿರುವ ಮಳೆರಾಯ, ಮೀನುಗಾರಿಕೆ ಇಲಾಖೆಗೆ ಬರುತ್ತಿದ್ದ ಆದಾಯಕ್ಕೂ ಕೊಕ್ಕೆ ಹಾಕಿದ್ದಾನೆ.
ಕಳೆದ ವರ್ಷ ನಿರೀೆಗೂ ಮೀರಿದ ಮಳೆ ಸುರಿದ ಪರಿಣಾಮ ದೊಡ್ಡ ಕೆರೆಗಳಿಂದ ಹಿಡಿದು ಸಣ್ಣಪುಟ್ಟ ಕೆರೆ&ಕುಂಟೆಗಳೂ ತುಂಬಿ ಹರಿದು, ಮೀನುಗಾರಿಕೆ ಕ್ಷೇತ್ರಕ್ಕೆ ಹುರುಪು ನೀಡಿತ್ತು. ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 124 ಕೆರೆಗಳು ಹಾಗೂ ನಾಲ್ಕು ಜಲಾಶಯಗಳು ಇವೆ. ಇವುಗಳನ್ನು ಟೆಂಡರ್, ಗುತ್ತಿಗೆ, ಪರವಾನಗಿ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದುಕೊಡಲಾಗುತ್ತದೆ.
2022&23ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 95 ಕೆರೆಗಳು ಮತ್ತು ಒಂದು ಜಲಾಶಯವನ್ನು ವಿಲೇ ಮಾಡುವ ಮೂಲಕ ಇಲಾಖೆ ಒಟ್ಟು 63 ಲಕ್ಷ ರೂ. ಆದಾಯ ಗಳಿಸಿತ್ತು. ಆದರೆ, ಈ ಬಾರಿ ಇದಕ್ಕೆ ವಿರುದ್ಧವಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಬಾರಿ 59 ಕೆರೆಗಳು ಮತ್ತು ಒಂದು ಜಲಾಶಯವನ್ನು ವಿಲೇ ಮಾಡಲಾಗಿದ್ದು, 68 ಕೆರೆಗಳಲ್ಲಿ ನೀರಿನ ಕೊರತೆ ಕಾರಣದಿಂದಾಗಿ ಬಾಕಿ ಉಳಿದಿವೆ. ಉಳಿದಂತೆ ಈಗಾಗಲೇ ಸುಮಾರು 22 ಲಕ್ಷ ರೂ. ಆದಾಯ ಖೋತಾ ಆಗಿದೆ.
ಜಿಪಂ ವ್ಯಾಪ್ತಿಯಲ್ಲಿ ಸಾವಿರಾರು ಕೆರೆಗಳು ಇವೆ. ಇವುಗಳಿಂದಲೂ ಸ್ಥಳಿಯ ಗ್ರಾಮ ಪಂಚಾಯಿತಿಗಳಿಗೆ ಆದಾಯ ಬರುತ್ತಿತ್ತು. ಕಳೆದ ಸಾಲಿನಲ್ಲಿ ಬಹುತೇಕ ಕೆರೆಗಳು ತುಂಬಿದ ಪರಿಣಾಮ ಸ್ಥಳಿಯವಾಗಿ ಗ್ರಾಪಂ ಆಡಳಿತ ಮಂಡಳಿ ಹರಾಜು ಕೂಗುವ ಮೂಲಕ ಹಣ ಗಳಿಸುತ್ತಿದ್ದವು. ಆದರೆ ಈ ಬಾರಿ ಶೇ.90ರಷ್ಟು ಕೆರೆಗಳು ಇನ್ನು ಕೆಲವೇ ದಿನಗಳಲ್ಲಿ ಖಾಲಿಯಾಗಲಿದ್ದು, ಮೀನುಗಾರಿಕೆ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಪಂನ ಆದಾಯಕ್ಕೂ ಮಳೆರಾಯ ಕೊಡಲಿ ಪೆಟ್ಟು ನೀಡಿದ್ದಾನೆ.
ಬೇಡಿಕೆ ಕುಸಿತ
ಜಿಲ್ಲೆಯಲ್ಲಿ ಬಿಡದಿಯ ನಲ್ಲಿಗುಡ್ಡ ಕೆರೆ ಮತ್ತು ಚನ್ನಪಟ್ಟಣದ ಕಣ್ವ ಜಲಾಶಯದ ಬಳಿ ಸರ್ಕಾರಿ ಸ್ವಾಮ್ಯದ ಎರಡು ಮೀನು ಮರಿ ಉತ್ಪಾದನಾ ಟಕಗಳು ಇವೆ. ಉಳಿದಂತೆ ಖಾಸಗಿಯಾಗಿ 10 ಮಂದಿ ಪರವಾನಗಿ ಹೊಂದಿದ ಮೀನುಮರಿ ಸಾಕಣೆದಾರರು ಇದ್ದಾರೆ. ಇವುಗಳ ಮೂಲಕವೇ ಜಿಲ್ಲೆ ಮತ್ತು ಹೊರ ಜಿಲ್ಲೆಯ ಮೀನು ಮರಿಗಳ ಬೇಡಿಕೆಯನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಕೆರೆಗಳು ಖಾಲಿ ಇರುವ ಕಾರಣ ಮೀನು ಮರಿಗೂ ಬೇಡಿಕೆ ಕುಸಿದಿದೆ.
ಕೆರೆಗಳ ಒತ್ತುವರಿ ತೆರವಿಗೆ ಕ್ರಮ
ಜಿಲ್ಲೆಯಲ್ಲಿ ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿಗೆ ಸೇರಿದ ಕೆರೆಗಳು ಒಳಗೊಂಡಂತೆ ಒಟ್ಟು 1496 ಕೆರೆಗಳಿದ್ದು, ಇವುಗಳಲ್ಲಿ ಹಲವು ಕೆರೆಗಳ ಸರ್ವೇ ಕಾರ್ಯ ಮುಗಿಸಿ ಒತ್ತುವರಿ ತೆರವುಗೊಳಿಸಲಾಗಿದೆ. ಈಗಾಗಲೇ ಭೂ ದಾಖಲೆಗಳ ಇಲಾಖೆ ತ್ವರಿತ ಗತಿಯಲ್ಲಿ ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಂಡಿದ್ದು 800ಕ್ಕೂ ಹೆಚ್ಚು ಕೆರೆಗಳ ಸರ್ವೇಯನ್ನು ಪೂರ್ಣಗೊಳಿಸಿದೆ. ಕೆರೆಗಳು ಈಗ ಬಹುತೇಕ ಖಾಲಿ ಇರುವ ಕಾರಣ ಸರ್ವೇ ಕಾರ್ಯವನ್ನು ತ್ವರಿತವಾಗಿ ಕೈಗೊಂಡರೆ ಒತ್ತುವರಿ ತೆರವಿಗೂ ಅನುಕೂಲವಾಗಲಿದೆ.
ತಾಲೂಕುವಾರು ಕೆರೆಗಳ ವಿವರ
ತಾಲೂಕು ಎಂಐ ಜಿಪಂ ಕಾವೇರಿ ನಗರ
ರಾಮನಗರ 19 221 0 25
ಚನ್ನಪಟ್ಟಣ 32 395 1 02
ಮಾಗಡಿ 32 271 1 04
ಕನಕಪುರ 27 435 1 30
ಒಟ್ಟು 110 1322 3 61
ಮೀನುಗಾರಿಕೆ ಇಲಾಖೆ
ವರ್ಷ ಒಟ್ಟು ವಿಲೆ (ಕೆರೆ/ಆದಾಯ) ಬಾಕಿ ಕೆರೆಗಳು
2022-23 96 / 63,02,268 17
2023-24 60 / 41,07,501 68
ಯಾವು ಎಷ್ಟು?
ಕೆರೆಗಳು 1496
ಜಲಾಶಯ 4