ಜಿಲ್ಲೆ

ಆಲಂದೂರು ಬಳಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕೋತಿಗಳ ಶವ ಪತ್ತೆ

Udupi

ಬೈಂದೂರು: ಜಿಲ್ಲೆಯ ಜನತೆ ಕರೊನಾ ವೈರಸ್ ಆತಂಕದಲ್ಲಿರುವ ಮಧ್ಯೆ ಯಡ್ತರೆ ಗ್ರಾಮದ ಆಲಂದೂರು ಬಳಿ ಎರಡು ಕೋತಿಗಳ ಶವ ಪತ್ತೆಯಾಗಿ ಜನರಲ್ಲಿ ಆತಂಕ ಹೆಚ್ಚಿಸಿದೆ. ನೀರು ಹರಿಯುವ ತೋಡು ಕಸ ತುಂಬಿ ಬ್ಲಾಕ್ ಆಗಿದ್ದು, ಇದನ್ನು ಸ್ವಚ್ಛಗೊಳಿಸಲು ಹೋಗಿದ್ದ ಸ್ಥಳೀಯರಿಗೆ ಕೊಳೆತ ಸ್ಥಿಯಲ್ಲಿರುವ ಮಂಗಗಳ ಕಳೇಬರ ಕಂಡುಬಂದಿದೆ.
ಈ ಬಗ್ಗೆ ತಕ್ಷಣ ಅರಣ್ಯ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಗಳ ಶವವನ್ನು ಮಣ್ಣು ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕೋತಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಕಾರಣ ಪೋಸ್ಟ್‌ಮಾರ್ಟಂ ಸಾಧ್ಯವಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ವಿಷಪ್ರಾಶನ ಹಾಗೂ ಪರಸ್ಪರ ಕಚ್ಚಾಟದಿಂದ ಕೋತಿಗಳು ಸಾಯುವ ಸಾಧ್ಯತೆಗಳಿವೆ. ಇದು ಯಾವುದೇ ಕಾಯಿಲೆಯಿಂದ ಸತ್ತಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಬೈಂದೂರು ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೇಮಾನಂದ್, ಉಪ ವಲಯಾರಣ್ಯಾಧಿಕಾರಿ ಶಂಕರ್ ಇದ್ದರು.