ಜಿಲ್ಲೆ

ಕೋತಿ ಕಚ್ಚಿದ್ದರಿಂದ ಬಿಮ್ಸ್‌ಗೆ ದಾಖಲು

ಕಂಪ್ಲಿ: ತಾಲೂಕಿನ ಮೆಟ್ರಿಯಲ್ಲಿ ಕರಿ ಕೋತಿ ಹಾವಳಿ ಹೆಚ್ಚಿದ್ದು ಅನೇಕರನ್ನು ಚೂರಿ, ಕಚ್ಚಿ ಗಾಯಗೊಳಿಸಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮದ 3ನೇವಾರ್ಡ್ ಈರಣ್ಣ ಗುಡಿ ಬಳಿ ಮಂಗಳವಾರ ಅಂಗವಿಕಲ ನಾಗರಾಜ ಅವರ ಹೊಟ್ಟೆ, ಪಕ್ಕೆ, ಬೆನ್ನಿಗೆ ಕರಿಕೋತಿ ಕಚ್ಚಿ ಗಾಯಗೊಳಿಸಿದೆ.

ಕಂಪ್ಲಿಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಮ್ಸ್‌ಗೆ ದಾಖಲಿಸಿದೆ. ಗ್ರಾಮದಲ್ಲಿ ಕೋತಿಗಳ ಸಂಖ್ಯೆ ಹೆಚ್ಚಿದ್ದು ಕರಿಕೋತಿಯೊಂದರ ಉಪಟಳ ಕಳೆದ ಇಪ್ಪತ್ತು ದಿನಗಳಿಂದ ಹೆಚ್ಚಾಗಿದೆ. ಕೋತಿಯ ಉಪಟಳಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದಾರೆ.

ಕರಿಕೋತಿಯನ್ನು ಸೆರೆ ಹಿಡಿದು ದೂರ ಸಾಗಿಸಬೇಕು ಎಂದು ಗ್ರಾಪಂ.ಉಪಾಧ್ಯಕ್ಷ ನೇಣ್ಕಿ ಗಿರೀಶ, ಸದಸ್ಯ ಎಚ್.ಕುಮಾರಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಜಗದೀಶ, ಪ್ರಮುಖರಾದ ಮಲ್ಲಿಕಾರ್ಜುನ, ಚೌಡಪ್ಪ ಇತರರು ಆಗ್ರಹಿಸಿದ್ದಾರೆ.