ಜಿಲ್ಲೆ

ರೈಲ್ವೆ ಅಧಿಕಾರಿ ಹೆಸರಿನಲ್ಲಿ ಹಣ ವರ್ಗಾವಣೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಹೆಸರಿನಲ್ಲಿ ಅಪರಿಚಿತರು ರೈಲ್ವೆ ಅಧಿಕಾರಿಯೊಬ್ಬರಿಗೆ ಫೋನ್ ಮೂಲಕ ಕರೆ ಮಾಡಿ ಒಂದು ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ ಘಟನೆ ನಡೆದಿದೆ.

ನಗರದ ಆಂಜನೇಯಲು ಎಂಬುವವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂಪರ್ಕಿಸಿದ ಅಪರಿಚಿತರು ನಾನು ನೈಋತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇರ್ ಎಂದು ಹೇಳಿಕೊಂಡು, ನನಗೆ ಅರ್ಜೆಂಟ್ ಹಣ ಬೇಕಾಗಿದೆ. ನಾನು ಸದ್ಯ ಮೀಟಿಂಗ್‌ನಲ್ಲಿದ್ದೀನಿ 1 ಲಕ್ಷ ರೂ. ನನ್ನ ಖಾತೆಗೆ ಟ್ರಾನ್ಸ್‌ಫರ್ ಮಾಡಿ. ನಾನು ನಿಮಗೆ ಮರಳಿ ಕೊಡುತ್ತೇನೆ ಎಂದು ಹೇಳಿ 50 ಸಾವಿರ ರೂ.ನಂತೆ ಎರಡು ಬಾರಿ ಖಾತೆಗೆ ಹಾಕಿಸಿಕೊಂಡಿದ್ದಾರೆ. 1 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆಂಜನೇಯಲು, ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.