ಹುಬ್ಬಳ್ಳಿ: ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ನರಗುಂದ ತಾಲೂಕಿನ ಕುರಗೋವಿಂದಕೊಪ್ಪ ಶಿವಕುಮಾರ ಕೆ. ಎಂಬುವರ ಖಾತೆಯಿಂದ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಫೇಸ್ಬುಕ್ ಖಾತೆಗೆ ವೆಬ್ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಅಪರಿಚಿತರು ಕೇಳಿಕೊಂಡಿದ್ದಾರೆ. ನಂತರ ಹಂತ ಹಂತವಾಗಿ 2,21,671 ರೂ. ಹಣ ವರ್ಗಾಯಿಸಿಕೊಂಡು, ಮರಳಿ ಕೊಡದೇ ವಂಚಿಸಿದ್ದಾರೆ. ಕೆಲ ಬ್ಯಾಂಕ್ಗಳು ಹುಬ್ಬಳ್ಳಿಯಲ್ಲಿ ಇರುವುದರಿಂದ ಶಿವಕುಮಾರ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.