ಜಿಲ್ಲೆ

ಹಣ ದುರ್ಬಳಕೆ, ಎಫ್‌ಡಿಎಗೆ ನಾಲ್ಕು ವರ್ಷ ಜೈಲು ಶಿಕ್ಷೆ

ನರೇಶ್ ಕುಮಾರ್

ಕಂಪ್ಲಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ವೆಂಕಟಸ್ವಾಮಿ ಹಣ ದುರ್ಬಳಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೊಸಪೇಟೆ ಜೆಎಂಎಫ್ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿದೆ.

ಬಳ್ಳಾರಿಯ ಕೌಟುಂಬಿಕ ಕಲಹ ನ್ಯಾಯಾಲಯಕ್ಕೆ ಡಿಡಿ ರೂಪದಲ್ಲಿ ಸಂದಾಯ ಮಾಡಬೇಕಿದ್ದ 1.25 ಲಕ್ಷ ರೂ.ಅನ್ನು ವಿ.ವೆಂಕಟಸ್ವಾಮಿ, ಪತ್ನಿ ಖಾತೆಗೆ ಜಮಾ ಮಾಡಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಅಂದಿನ ತಹಸೀಲ್ದಾರ್ ರೇಣುಕಾ 2020ರ ಜೂ.24ರಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಆಗಿನ ಪಿಎಸ್‌ಐ ಮೌನೇಶ ರಾಠೋಡ್ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 2024ರ ಅ.26ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎನ್.ರಮೇಶಬಾಬು ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಟಿ.ರೇವಣಸಿದ್ದಪ್ಪ ವಾದ ಮಂಡಿಸಿದ್ದರು.