ಜಿಲ್ಲೆ

ಹುಂಡಿಯಲ್ಲಿದ್ದ ಹಣ ಕಳವು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಹೊಸ ಗಬ್ಬೂರಿನ ಜೈನ ಮಂದಿರದಲ್ಲಿ ಹುಂಡಿಯಲ್ಲಿದ್ದ ಹಣ ಕಳವಾದ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನದ ತಿಜೋರಿ ಕೀಲಿ ಮುರಿದ ಕಳ್ಳರು ಹುಂಡಿಯಲ್ಲಿದ್ದ 7 ಲಕ್ಷ ರೂ.ಗೂ ಹೆಚ್ಚು ಹಣ ಕದ್ದು ಪರಾರಿಯಾಗಿದ್ದಾರೆ. ಜ. 3ರಂದು ಈ ಘಟನೆ ನಡೆದಿದ್ದು, ಕಳವಾದ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.