ಜಿಲ್ಲೆ

ಹಣ ವಂಚನೆ ಕುರಿತು ಇರಲಿ ಜಾಗ್ರತೆ

ರಾಮದುರ್ಗ: ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಭಾರತೀಯ ರಿಸರ್ವ್​ ಬ್ಯಾಂಕ್​ ದೇಶಾದ್ಯಂತ ಆರ್ಥಿಕ ಸಾರತೆ ಸಪ್ತಾಹ ಹಮ್ಮಿಕೊಂಡು ಆರ್ಥಿಕ ಸಾರತೆ ಮೂಡಿಸಲು ಹಲವು ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ ಎಂದು ಬೆಳಗಾವಿ ಎಲ್​ಡಿಎಂ ಪ್ರಶಾಂತ ೂಡಕೆ ಹೇಳಿದರು.

ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​, ಬೆಳಗಾವಿ ಎಲ್​ಡಿಎಂ ಕಚೇರಿ ಹಾಗೂ ಅಮೂಲ್ಯ ಆರ್ಥಿಕ ಸಾರತೆ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಆರ್ಥಿಕ ಸಾರತಾ ಸಪ್ತಾಹದಲ್ಲಿ ಮಾತನಾಡಿದರು.

ೋನ್​ ಕರೆಗಳ ಮುಖಾಂತರ ಒಟಿಪಿ ಪಡೆದು ಹಣ ಲಪಟಾಯಿಸಿ ಮೋಸ ಮಾಡುತ್ತಿರುವ ಪ್ರಕರಣ ನಡೆಯುತ್ತಿದ್ದು, ಅಂತಹ ವಂಚನೆಗಳ ಬಗೆಗೆ ಮಹಿಳೆಯರು ಜಾಗೃತರಾಗಬೇಕು ಎಂದರು.

ತಾಪಂ ಇಒ ಬಸವರಾಜ ಐನಾಪುರ ಮಾತನಾಡಿ, ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಸಾಮಾಜಿಕ ಭದ್ರತೆಯ ವಿಮಾ ಯೋಜನೆ ಮಾಡಿಸಲಾಗುತ್ತಿದ್ದು, ಇದರಿಂದ ಕೌಟುಂಬಿಕ ಭದ್ರತೆ ಸಿಗಲಿದೆ ಎಂದರು.

ಕೆನರಾ ಬ್ಯಾಂಕ್​ ಹಿರಿಯ ಪ್ರಬಂಧಕ ಅಜಿತ ರಾಜನ್ನವರ ಕೇಂದ್ರ ಸರ್ಕಾರದ ಸಾಮಾಜಿಕ ಸುರಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಾರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ, ಪುರಸಭೆಯ ಡೇ&ನೆಲ್ಮ್​ ಯೋಜನಾಧಿಕಾರಿ ಗೀತಾ ಬೆಳಗಲಿ, ನೀಲಮ್ಮ ಹಿರೇಮಠ, ಅತಾ ಹಲ್ಯಾಳ ಇತರರಿದ್ದರು.