ದಾಬಸ್‌ಪೇಟೆ: ಮಠಗಳು ವಾಡುತ್ತಿರುವ ಶರಣ ಸಂಸ್ಕೃತಿ ಪ್ರಚಾರ, ಧಾರ್ಮಿಕ ಕಾರ್ಯಗಳಿಂದಾಗಿ ಸಂಸ್ಕಾರಯುತ ಸವಾಜ ನಿರ್ವಾಣವಾಗುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ನೆಲಮಂಗಲ ತಾಲುಕು ಸೋಂಪುರ ಹೋಬಳಿಯ ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ, ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಸವಾರಂಭ ಉದ್ಘಾಟಿಸಿ ವಾತನಾಡಿದರು. ಸಿದ್ಧಗಂಗಾ ಮಠದ ಶ್ರೀ ಶಿವಕುವಾರ ಶ್ರೀಗಳ ಕಾಯಕ ದಾಸೋಹ ತತ್ವ, ವಾರ್ಗದರ್ಶನ ನನಗೆ ಪ್ರೇರಣೆಯಾಗಿದೆ ಎಂದರು.
ನೊಣವಿನಕೆರೆ ಶ್ರೀಗಳಿಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ. ಮೇಲಣಗವಿ ಮಠದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ವಷರ್ದೊಳಗಾಗಿ ರೇಣುಕಾ ಜಯಂತಿ ಆಚರಣೆ ವಾಡುವ ಮಠದ ಆವರಣದ ಜಾಗಕ್ಕೆ ಕಾಂಕ್ರಿಟ್ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.
ಹೊನ್ನಮ್ಮಗವಿ ಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗಂಗಾಧರ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾದ ಶಿವಾನುಯೋಗ ಪ್ರತಿಫಲವಾಗಿ ಶಿವಗಂಗಾ ಶ್ರೀ ಪ್ರಶಸ್ತಿಗೆ ಪಾತ್ರರಾಗಿರುವುದು ಮಾದರಿ ಎನಿಸಿದೆ. ಡಾ.ಶ್ರೀ ಶಿವಕುವಾರ ಶಿವಯೋಗಿಗಳ ಪ್ರೇರಣೆಯಾಗಿರಿಸಿಕೊಂಡು ಕ್ಷೇತ್ರದ ಎಲ್ಲ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ದಾಸೋಹ ವಾಡಿಸುತ್ತಾ ದಾಸೋಹಿಯಾಗಿರುವ ಶಾಸಕ ಎನ್.ಶ್ರೀನಿವಾಸ್ ಜನಪ್ರತಿನಿಧಿಗಳಿಗೆ ವಾದರಿಯಾಗಿದ್ದಾರೆ ಎಂದರು.
ಸಂಸದ ಡಾ.ಸುಧಾಕರ್ ವಾತನಾಡಿ, ವಿಶ್ವದಲ್ಲಿ ಶ್ರೇಷ್ಠ ಸ್ಥಾನದಲ್ಲಿದ್ದೇವೆ. ನಮ್ಮಲ್ಲಿರುವ ಯೋಗಿಗಳಿಂದ ದೇಶ ಪವಿತ್ರವಾಗಿದೆ. ತಳಮಟ್ಟಗಳಲ್ಲಿ ವಿದ್ಯಾಭ್ಯಾಸ, ಶಿಕ್ಷಣವನ್ನು ನೀಡುವುದರಿಂದ ಉತ್ತಮ ಸಂಸ್ಕಾರದಿಂದ ನಾವು ಕಲಿಯುತ್ತಿದ್ದೇವೆ ಎಂದರು.
ವನಕಲ್ಲು ಮಠದ ಶ್ರೀ ಬಸವರವಾನಂದ ಸ್ವಾಮೀಜಿ, ಬೆಂಗಳೂರು ನಗರ ಜಿಪಂ ವಾಜಿ ಅಧ್ಯಕ್ಷ ಮರಿಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಎನ್.ಎಸ್.ನಟರಾಜು, ದಯಾಶಂಕರ್, ಮಹಿಳಾ ಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಮ್ಮಪ್ರಕಾಶ್, ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಮಹಿಳಾ ಟಕ ಅಧ್ಯಕ್ಷೆ ವೇದಾವತಿ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದೀಪ್, ಮುಖಂಡರಾದ ಕೆ.ಬಿ.ಪ್ರಭುದೇವ, ಪುಟ್ಟಗಂಗಯ್ಯ, ಆರ್.ಶಿವಕುವಾರ್, ಎನ್.ಆರ್.ಸಿದ್ದರಾಜು, ಕೆ.ಪಿ.ಭಂಗೀಶ್, ನಂದೀಶ್ ಇದ್ದರು.
ನೊಣವಿನಕೆರೆ ಶ್ರೀಗಳಿಗೆ ತಪಃಶಕ್ತಿ ಧಾರೆ
ರೇಣುಕಾ ಭಗವತ್ಪಾದರು ಪ್ರತಿಯೊಬ್ಬರಲ್ಲೂ ಪೂಜ್ಯತಾ ಭಾವನೆ ಬೆಳೆಸಿದವರು. ಜಾತಿ, ಮತ ಭೇದವಿಲ್ಲದೇ ಸವಾಜ ನಿರ್ಮಿಸಿದವರು. ಧರ್ಮವನ್ನು ನಾಲ್ಕು ಗೋಡೆಗಳ ಮಧ್ಯೆ ಆಚರಣೆ ವಾಡುವುದಲ್ಲ. ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆಯಂದು ರೇಣುಕಾಚಾರ್ಯರ ಸಂದೇಶಗಳನ್ನು ಸಾರುವುದರ ಜತೆಗೆ ಪ್ರತಿಯೊಂದು ವರ್ಗಗಳ ಜನತೆ ಸ್ನೇಹ ಪ್ರೀತಿ, ಭಾವನೆಯನ್ನು ಬೆಸೆಯುವ ಉದ್ದೇಶವಾಗಿದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಠದ ಅಂಗಳದಿಂದ ಆರಂಭವಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸವಾರಂಭವಾಗಿ ಬದಲಾಗಿದೆ. ಶವ ಸಂಸ್ಕಾರಕ್ಕೆ ಮೀಸಲಿದ್ದ ಭೂಮಿಯಲ್ಲಿ ದೊಡ್ಡ ಸವಾರಂಭಗಳೇ ನಡೆಯುತ್ತಿದ್ದು, ಪುಣ್ಯ ಭೂಮಿಯಾಗಿ ಪರಿವರ್ತಿತವಾಗಿದೆ. ನಾಡಿನ ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಪ್ರಸ್ತುತ ವಷರ್ ನೊಣವಿನಕೆರೆ ಶ್ರೀಗಳಿಗೆ ಪ್ರಶಸ್ತಿ ಸಮರ್ಪಣೆ ವಾಡುತ್ತಿದ್ದು, ಶಿವೈಕ್ಯ ಗಂಗಾಧರ ಜಗದ್ಗುರುಗಳಿಗೇ ಅರ್ಪಿಸಿದಂತಾಗಿದೆ. ಕೊನೆಯ ದಿನಗಳವರೆಗೂ ಗಂಗಾಧರ ಜಗದ್ಗುರುಗಳ ಸೇವೆ ವಾಡಿದ ನೊಣವಿನಕೆರೆ ಶ್ರೀಗಳಿಗೆ ತಪಃಶಕ್ತಿಯನ್ನು ಧಾರೆ ಎರೆದಿದ್ದಾರೆ ಎಂದರು.
ಪ್ರದೀಪ್‌ಈಶ್ವರ್‌ಗೆ ಸಂಸದ ಸುಧಾಕರ್ ಟಾಂಗ್
ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅವರು ರಾಜ್ಯದ ಜನರಿಗೆ ಜ್ಞಾನ ತುಂಬುವ ಮಹಾನ್ ಕೆಲಸ ವಾಡುತ್ತಾರೆ. ಅವರು ಏನು ಎಂಬುದು ನನಗೆ ಗೊತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್‌ಗೆ ಸಂಸದ ಸುಧಾಕರ್ ಟಾಂಗ್ ನೀಡಿದರು. ಇದು ಸಾಧು, ಸಂತರು, ಪವಾಡ ಪುರುಷರ ಕಾರ್ಯಕ್ರಮ. ಪಕ್ಷದ ಕಾರ್ಯಕ್ರಮ ಅಲ್ಲ, ಇಂತಹ ವೇದಿಕೆಗಳಲ್ಲಿ ರಾಜಕೀಯ ವಾಡಬಾರದು. ತಾತಯ್ಯ ಅವರು ವಿಶ್ವವಾನವರಾಗಿ ಅಂತ ಹೇಳಿದ್ರೆ... ಅಲ್ಪ ವಾನವ ಆಗಲು ಹೊರಟಿದ್ದೇವೆ, ಅವರಿಗೆ ತಾತಯ್ಯ ಅವರೆ ಬುದ್ಧಿಕೊಡಲಿ ಎಂದರು.
ರೇಣುಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ನೊಣವಿನಕೆರೆ ಶ್ರೀಗಳಿಗೆ ಶಿವಂಗಂಗಾ ಶ್ರೀ ಪ್ರಶಸ್ತಿ ಸಮರ್ಪಣೆ ವಾಡುತ್ತಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಪರವಾತ್ಮ ಗುರುವಿನ ರೂಪದಲ್ಲಿ ಅವತರಿಸಲಿದ್ದಾನೆ ಎಂಬ ವಾತು ನೊಣವಿನಕೆರೆ ಶ್ರೀಗಳಿಂದ ರುಜುವಾತಾಗಿದೆ. -ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಭೂತಿಪುರ ಮಠ ಶಿವಗಂಗಾ ಕ್ಷೇತ್ರ ರೇವಣಸಿದ್ಧರು ತಪಸ್ಸು ವಾಡಿ ನಡೆದಾಡಿದ ಶ್ರೇಷ್ಠ ಸ್ಥಳವಿದು. ಒಳಕಲ್ಲು ತೀರ್ಥದಲ್ಲಿ ನೀರು ಸಿಕ್ಕರೆ ಅವರು ಪವಿತ್ರರಾಗುತ್ತಾರೆ. ಕುಂಭಮೇಳಕ್ಕೆ ಹೋಗಿ ಹಲವರು ತೀರ್ಥ ತಂದರು. ಆದರೆ ಶಿವಗಂಗೆಯಲ್ಲಿ ಸಿಗುವ ತೀರ್ಥ ಪವಿತ್ರವಾಗಿರುತ್ತದೆ. -ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠಾಧ್ಯಕ್ಷ