ಜಿಲ್ಲೆ

ಹಸಿದ ಹೊಟ್ಟೆಗೆ ಅನ್ನ ನೆಮ್ಮದಿ ಕಾರ್ಯ

Chitradurga

ಮೊಳಕಾಲ್ಮೂರು: ಹಸಿದವರಿಗೆ ಅನ್ನ ಕೊಟ್ಟು ತೃಪ್ತಿ ಪಡಿಸುವುದೇ ಮಹತ್ವಪೂರ್ಣವಾದ ಕಾರ್ಯ, ಇದಕ್ಕಿಂತ ಸೇವೆ ಮತ್ತೊಂದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ತಾಪಂ ಆವರಣದಲ್ಲಿ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಸ್ಥಾಪಿಸಿರುವ ದಾಸೋಹ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಮೊಳಕಾಲ್ಮೂರು ಬರಪೀಡಿತ ಪ್ರದೇಶ. ಗ್ರಾಮೀಣ ಜನರು ಕೆಲಸ ಕಾರ್ಯದ ನಿಮಿತ್ತ ಪಟ್ಟಣಕ್ಕೆ ಬಂದಾಗ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ದಾಸೋಹ ಕೇಂದ್ರ ಆರಂಭಿಸಲಾಗಿದೆ ಎಂದರು.

ಇದು ಯಶಸ್ವಿಯಾಗಿ ಮುನ್ನಡೆಯಬೇಕೆಂದರೆ ಎಲ್ಲರ ಸಹಕಾರ ಬೇಕು. ಊಟ ಮಾಡುವ ವೇಳೆ ಪರಸ್ಪರ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನ್ನ ವ್ಯರ್ಥ ಮಾಡಬಾರದು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್, ಅಧಿಕಾರಿಗಳಾದ ಪ್ರೇಮನಾಥ, ಶೇಖರ್, ರಾಮಪ್ಪ ಪೂಜಾರ್, ಎಚ್.ಕಾಂತರಾಜ್, ಪಾತಲಿಂಗಪ್ಪ, ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಮಂಜುನಾಥ್, ರಾಮರೆಡ್ಡಿ, ನಗರ ಅಧ್ಯಕ್ಷ ಶಾಂತಾರಾಮ್, ಶುಭಾ, ಶೋಭಾ, ಭೀಮಣ್ಣ, ಸಿದ್ದಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ, ಪರಮೇಶಿ, ಮಹೇಶ್ ಇತರರಿದ್ದರು.