ಜಿಲ್ಲೆ

ತಾಪಂ ಉಪಾಧ್ಯಕ್ಷೆಯಾಗಿ ಚನ್ನಮ್ಮ ಆಯ್ಕೆ

Chitradurga

ಮೊಳಕಾಲ್ಮೂರು: ಇಲ್ಲಿನ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ರಾಂಪುರ ಕ್ಷೇತ್ರದ ಚನ್ನಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ತಾಪಂ ಸಭಾಂಗಣದಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಚನ್ನಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರ ಆಯ್ಕೆಯನ್ನು ಅವಿರೋಧ ಎಂದು ಚುನಾವಣಾಧಿಕಾರಿ, ಎಸಿ ಪ್ರಸನ್ನಕುಮಾರ ಘೋಷಿಸಿದರು.

ತಾಪಂ ಅಧ್ಯಕ್ಷೆ ಜಿ. ಬೋರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ವೀರೇಶ್, ಸದಸ್ಯರಾದ ಬಸಮ್ಮ, ಜಿ.ಎಸ್. ಬಸಣ್ಣ, ತಿಮ್ಮಕ್ಕ, ಪಟೇಲ್ ಜಿ. ಪಾಪನಾಯಕ, ದಡಗೂರು ಮಂಜಣ್ಣ, ಕೊಂಡಾಪುರ ಪರಮೇಶಿ, ಬಸವರಾಜ್ ಇತರರಿದ್ದರು.