ಮೊಳಕಾಲ್ಮೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ವಸತಿ ಗೃಹಗಳ ಬಳಿ ಶುಕ್ರವಾರ ವಿನಾಯಕನ ಪ್ರತಿಷ್ಠಾಪನೆ ಮಾಡಲಾಯಿತು.
ವಠಾರದ ಸುತ್ತಮುತ್ತ ದೇಗುಲಗಳಿಲ್ಲದ ಕಾರಣ ವಸತಿ ಗೃಹಗಳ ಮುಂಭಾಗದಲ್ಲಿನ ದೇವರ ಹಳೆಯ ಕಟ್ಟೆಯಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಹೊಸ ವಸ್ತ್ರಧರಿಸಿದ ಪೊಲೀಸ್ ಸಿಬ್ಬಂದಿ ಕುಟುಂಬ ಸಮೇತ ಶ್ರದ್ಧೆ, ಭಕ್ತಿಯಿಂದ ದೇವರ ಕಾರ್ಯ ನೆರವೇರಿಸಿದರು. ಪೇದೆಗಳಾದ ಕಲ್ಲೇಶಪ್ಪ, ಕೃಷ್ಣಪ್ಪ, ನಾಗೇಂದ್ರಪ್ಪ, ಜಯ್ಯಣ್ಣ, ದೇವರಾಜ್, ಚಂದ್ರಶೇಖರ್, ಭರತೇಶ್, ರಮೇಶ್, ದಾದಾಪೀರ್, ಬಾಷಾ, ಚಂದ್ರು, ಅರುಣ್‌ಕುಮಾರ್, ರಾಘವೇಂದ್ರ ಇದ್ದರು.