ಜಿಲ್ಲೆ

ದೇವರ ದರ್ಶನಕ್ಕೂ ದಿಬ್ಬಂಧನ

Chitradurga

ಮೊಳಕಾಲ್ಮೂರು: ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ದೇಗುಲಗಳಿಗೆ ಬೀದಿ ಜಡಿದಿದ್ದರಿಂದ ಭಕ್ತರಿಲ್ಲದ ದೇವಸ್ಥಾನಗಳು ಬಣಗುಡುತ್ತಿದ್ದು, ನಿತ್ಯ ಬೆಳಗ್ಗೆ ಸಂಜೆ ಎಣ್ಣೆ ಸ್ನಾನ, ಅಭಿಷೇಕ ಇತ್ಯಾದಿ ವಿಧಿಗಳನ್ನು ನೆರವೇರಿಸುತ್ತಿದ್ದ ಪೂಜಾರಿಗಳಿಗೆ ಕೈ ಕಟ್ಟಿದಂತಾಗಿದೆ.

ತಾಲೂಕು ಐತಿಹಾಸಿಕ ದೇಗುಲಗಳ ತವರು ಎಂದರೆ ತಪ್ಪಾಗಲಾರದು. ಕಾರಣ ಇಲ್ಲಿ ಕಾಲಭೈರವ ನುಂಕೆಮಲೆ ಸಿದ್ದೇಶ್ವರಸ್ವಾಮಿ, ರಾಮಾಯಣದ ಇತಿಹಾಸ ಸಾರುವ ಜಟ್ಟಂಗಿ ರಾಮೇಶ್ವರಬೆಟ್ಟ, ಬ್ರಹ್ಮಗಿರಿ ಬೆಟ್ಟ, ಬಾಂಡ್ರಾವಿ ಆಂಜನೇಯ ಸ್ವಾಮಿ, ಚಿಕ್ಕುಂತಿ ಕಂಪಳರಂಗ ಸ್ವಾಮಿ, ಮಾರ್ಕಂಡೇಯಸ್ವಾಮಿ, ವೆಂಕಟರಮಣಸ್ವಾಮಿ ಹೀಗೆ ನಾನಾ ದೇಗುಲಗಳಿವೆ. ಇಲ್ಲಿ ನಿತ್ಯವೂ ಮೊಳಗುತ್ತಿದ್ದ ಘಂಟನಾದ ಸ್ತಬ್ಧವಾಗಿದೆ. ಜನ ಜಂಗುಳಿ ಇಲ್ಲದೆ ದೇಗುಲಗಳೆಲ್ಲವೂ ಬಡಣಗುಡುತ್ತಿವೆ.