ಜಿಲ್ಲೆ

ಕೋವಿಡ್ ತಡೆಗೆ ಮಾಸ್ಕ್ ಕಡ್ಡಾಯ

Chitradurga

ಮೊಳಕಾಲ್ಮೂರು: ಕೋವಿಡ್ ತಡೆಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದರು.

ತಾಲೂಕು ಆಡಳಿತ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಗುರುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಜನರನ್ನು ತಲ್ಲಣಗೊಳಿಸಿರುವ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತೀ ಮುಖ್ಯ. ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಬಂಧನೆ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ಕರೊನಾ ಸೋಂಕು ಮುಕ್ತ ಜಿಲ್ಲೆ ಎಂಬ ವರದಿಯಿಂದ ಸಮಾಧಾನ ಇದ್ದರೂ ಆಂಧ್ರದ ಗಡಿಭಾಗದಲ್ಲಿ ಇರುವ ಕಾರಣ ಎಚ್ಚರ ತಪ್ಪುವಂತಿಲ್ಲ. ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳ ತಂಡವು ತಾಲೂಕಿನಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಲಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ, ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್, ಡಾ.ಚನ್ನಬಸವರಾಜ್, ಪಿಎಸ್‌ಐ ಎನ್.ಬಸವರಾಜ್, ಶ್ರೀನಿವಾಸ್, ವೈ.ತಿಪ್ಪೇಶಿ ಇತರರಿದ್ದರು.