ಜಿಲ್ಲೆ

ಸ್ವಕುಳಸಾಳಿ ಶ್ರಮಸಂಸ್ಕೃತಿಯ ಪ್ರತೀಕ

Chitradurga

ಮೊಳಕಾಲ್ಮೂರು: ಸ್ವಕುಳಸಾಳಿ ಸಮಾಜ ಶ್ರಮಸಂಸ್ಕೃತಿಯ ಪ್ರತೀಕ ಎಂದು ಬಾಲೇಹೊಸೂರು ದಿಗಾಂಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಸ್ವಕುಳಸಾಳಿ ಸಮಾಜದ ಮುಖ್ಯ ಗುರುಪೀಠದ ಪ್ರಥಮ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾದ್ವಾರ ಲೋಕಾರ್ಪಣೆ, ರಾಜ್ಯ ಮಟ್ಟದ ಸಮಾವೇಶ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದ ಯಾವ ಭಾಗದಲ್ಲೂ ಮಠಗಳಿಲ್ಲ, ಮಾರ್ಗದರ್ಶನ ನೀಡುವ ಗುರುವಿಲ್ಲವೆಂದು ಕೊರಗುತ್ತಿದ್ದ ಸಮಾಜಕ್ಕೆ ಪೂಜ್ಯ ಶ್ರೀ ಜಿಹ್ವೇಶ್ವರಾನಂದ ಭಾರತಿ ಸ್ವಾಮೀಜಿ ದೊರೆತ್ತಿದ್ದಾರೆ. ಇವರ ಮಾರ್ಗದರ್ಶನದಡಿ ಎಲ್ಲರೂ ಸಂಘಟಿತರಾಗಿ ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಡಬೇಕು ಎಂದರು.

ನೇಕಾರ ಸಮುದಾಯದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, 29 ಒಳ ಪಂಗಡಗಳಿರುವ ಸ್ವಕುಳಸಾಳಿ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಸಮುದಾಯದ ಪ್ರಗತಿಗೆ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ಸ್ವಕುಳಸಾಳಿ ಸಮಾಜದ ಅಭಿವೃದ್ಧಿಗಾಗಿ ಗುರುಪೀಠದಲ್ಲಿ ಯಾತ್ರಿನಿವಾಸ, ವೃದ್ಧಾಶ್ರಮ, ಯೋಗ ಶಿಕ್ಷಣ ಹಾಗೂ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಸಚಿವರಲ್ಲಿ ಕೋರಿದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸ್ವಕುಳಸಾಳಿ ಸಮಾಜದ ಗುರುಪೀಠ ಹಾಗೂ ಸಮುದಾಯದ ಪ್ರಗತಿಗಾಗಿ ಸರ್ಕಾರದಿಂದ 10 ಕೋಟಿ ರೂ. ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ್ ಎನ್.ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಹೊಳೆ ಐರಣಿ ಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಮರಮಹಂಸಾನಂದ ಸ್ವಾಮೀಜಿ, ಶಂಭುಲಿಂಗ ಗುರೂಜಿ ಸಾನ್ನಿಧ್ಯ ವಹಿಸಿದ್ದರು.

ಸಮಾಜದ ಮುಖಂಡರಾದ ರಮೇಶ್ ಎ.ಚಿಲ್ಲಾಳ, ನೀಲಕಂಠಪ್ಪ ರೋಕಡೆ, ಶಶಿಕಲಾ ಚೌಧರಿ, ಡಾ.ಪುಷ್ಪಾ ಕ್ಷೀರಸಾಗರ, ಭಾರತಿ, ಡಿ.ಎಂ.ಈಶ್ವರಪ್ಪ, ರಾಧಾಮಣಿ ಸ್ವಾಮಿದೇವ, ಡಾ.ಬಿ.ಜಿ.ಜ್ಞಾನದೇವ್, ಕೇಶವ, ಈಶ್ವರಪ್ಪ ಇತರರಿದ್ದರು.