ಜಿಲ್ಲೆ

ಜೀವರಕ್ಷಕ ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಿ

Chitradurga

ಮೊಳಕಾಲ್ಮೂರು: ಯಾವುದೇ ವಾಹನವಾಗಲಿ, ಜೀವರಕ್ಷಕ ಸಾಧನಗಳ ಬಳಕೆ ನಂತರವೇ ಚಾಲನೆ ಮಾಡಬೇಕು ಎಂದು ಸಿಪಿಐ ಗೋಪಾಲನಾಯ್ಕ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಮಂಗಳವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಜೀವ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಇದು ಒಡೆದು ಹೋಗದಂತೆ ರಕ್ಷಣೆ ಮಾಡಿಕೊಳ್ಳಬೇಕು. ಸ್ವಲ್ಪ ಮೈ ಮರೆತರೂ ಜೀವ ತ್ಯಾಗ ಮಾಡಬೇಕಾಗುತ್ತದೆ. ಬೈಕ್ ಚಲಾಯಿಸುವ ಮುನ್ನ ಹೆಲ್ಮೆಟ್, ಚಾಲನಾ ಪರವಾನಗಿ, ವಿಮಾ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ವಾಹನ ಚಾಲನೆ ವೇಳೆ ರಸ್ತೆ ಸುರಕ್ಷತೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.

ಪಿಎಸ್‌ಐ ಎಸ್. ಬಸವರಾಜ್ ಮಾತನಾಡಿ, ವಾಹನ ಸವಾರರು ಕಾನೂನಾತ್ಮಕ ಮಾನದಂಡಗಳನ್ನು ಮೀರಿ ನಡೆದರೆ ಶಿಕ್ಷೆ ತಪ್ಪಿದ್ದಲ್ಲ. ಚಿಕ್ಕ ಮಕ್ಕಳು ಬೈಕ್, ಕಾರು ಇತ್ಯಾದಿ ವಾಹನ ಓಡಿಸುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಪಾಲಕರು ಎಚ್ಚರವಹಿಸಬೇಕು ಎಂದರು.
ಪೊಲೀಸರಾದ ಜಯ್ಯಪ್ಪ, ದಾದಾಪೀರ್, ಶಿವಣ್ಣ, ದೇವರಾಜ್, ಚಂದ್ರಶೇಖರ್, ಬಾಷಾ, ಶ್ರೀಧರ್ ಇತರರಿದ್ದರು.