ಜಿಲ್ಲೆ

ರಾಂಪುರ ಬಸ್ ನಿಲ್ದಾಣದ ಅವ್ಯವಸ್ಥೆ; ಮೈಮರೆತರೆ ಅನಾಹುತ ಖಚಿತ

Chitradurga

ಮೊಳಕಾಲ್ಮೂರು: ತಾಲೂಕಿನ ರಾಂಪುರ ಬಸ್ ನಿಲ್ದಾಣದ ಆವರಣ ತಗ್ಗು ಗುಂಡಿಗಳಿಂದ ಕೂಡಿದ್ದು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರ ದೊಡ್ಡ ಗ್ರಾಮವಾಗಿದ್ದು ನಿತ್ಯ ಜನದಟ್ಟಣೆ ಇರುತ್ತದೆ. ಈಚೆಗೆ ಸುರಿದ ಮಳೆಗೆ ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣ ಗುಂಡಿಗಳು ನಿರ್ಮಾಣವಾಗಿವೆ. ಮೈಮರೆತರೆ ಅನಾಹುತ ಖಚಿತ.

ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಎರಡು ವರ್ಷವಾದರೂ ಸರಿಪಡಿಸಿಲ್ಲ. ಸಂಬಂಧಿತ ಇಲಾಖಾ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲಿರುವ ತಗ್ಗು ಗುಂಡಿಗಳು ಅನಾಹುತಕ್ಕೆ ಅಹ್ವಾನ ನೀಡುವಂತಿವೆ. ಅಧಿಕಾರಿಗಳಿಗೆ ಗೊತ್ತಿದ್ದರೂ ಕಾಣದಂತೆ ವರ್ತಿಸುತ್ತಿದ್ದಾರೆ.ಜನರು ನಿತ್ಯ ಪ್ರಯಾಸ ಅನುಭವಿಸುತ್ತಿದ್ದು, ಬಸ್ ಚಾಲಕರಂತೂ ಸರ್ಕಸ್ ಮಾಡುವಂತಾಗಿದೆ. ಸ್ಥಳೀಯ ಆಡಳಿತ ಶೀಘ್ರವೇ ಸರಿಪಡಿಸಬೇಕು.

-ಡಿ.ಪೆನ್ನಯ್ಯ, ಸಹ ಕಾರ್ಯದರ್ಶಿ, ತಾಲೂಕು ಸಿಪಿಐ

ರಾಂಪುರ ಸಾರ್ವಜನಿಕ ಬಸ್ ನಿಲ್ದಾಣದ ಕಾಯಕಲ್ಪಕ್ಕೆ ಅಂದಾಜು 30 ಲಕ್ಷ ರೂ. ಅನುದಾನದ ತುರ್ತು ಅಗತ್ಯತೆ ಇದೆ. ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ತಾತ್ಕಾಲಿಕವಾಗಿ ಗುಂಡಿಗಳನ್ನ ಮುಚ್ಚಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರವೇ ಸೂಕ್ತ ಕ್ರಮ ವಹಿಸಲಾಗುವುದು.

- ಪ್ರಕಾಶ್, ಇಒ ತಾಪಂ