ಮೊಳಕಾಲ್ಮೂರು: ಭಾರತದ ಹಿತ ಕಾಯುವುದೇ ಭಾರತೀಯ ಜನತಾ ಪಾರ್ಟಿಯ ಪಥ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ಹೇಳಿದರು.
ಬಿಜೆಪಿಯ 40ನೇ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.
1980ರಲ್ಲಿ ರಾಜಕೀಯ ಸಂಘಟನೆಯಾಗಿ ಹುಟ್ಟಿಕೊಂಡ ಭಾಜಪ ಇಂದು ದೇಶದ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿದೆ. ಇದನ್ನು ಸಂಘಟಿಸಿದ ಕೀರ್ತಿ ದೀನ್ ದಯಾಳ್ ಉಪಾಧ್ಯಾಯ, ಶಾಂ ಪ್ರಸಾದ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾನಿಯಂತಹ ಅನೇಕ ಗಣ್ಯರಿಗೆ ಸಲ್ಲುತ್ತದೆ ಎಂದರು.
ನಗರಾಧ್ಯಕ್ಷ ಶಾಂತಾರಾಮ್, ಮುಖಂಡರಾದ ಡಿ.ಎಂ.ಈಶ್ವರಪ್ಪ, ಚಂದ್ರಶೇಖರಗೌಡ, ಕೆ.ತಿಪ್ಪೇಸ್ವಾಮಿ, ಪಪಂ ಸದಸ್ಯರಾದ ಟಿ.ರವಿಕುಮಾರ್, ಮಂಜುನಾಥ, ಲೀಲಾವತಿ, ಪಿ.ಲಕ್ಷ್ಮಣ, ಶುಭಾ, ಭಾಗ್ಯಮ್ಮ, ಶೋಭಾ, ಕೆ.ತಿಪ್ಪೇಸ್ವಾಮಿ, ಸಿದ್ದಣ್ಣ, ವಿನಯ್, ರಾಜು ಇತರರಿದ್ದರು.