ಜಿಲ್ಲೆ

ದಲಿತ ಕುಟುಂಬಳಿಗೆ ಆಹಾರ ಧಾನ್ಯ

Chitradurga

ಮೊಳಕಾಲ್ಮೂರು: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ತಾಲೂಕಿನ ಯರ್ಜೇನಹಳ್ಳಿಯ 60 ದಲಿತ ಕುಟುಂಬಗಳಿಗೆ ಗುರುವಾರ ಅದೇ ಗ್ರಾಮದ ಇಬ್ಬರು ವ್ಯಕ್ತಿಗಳು ಆಹಾರ ಧಾನ್ಯ, ತರಕಾರಿ ವಿತರಿಸಿ ಉದಾರತೆ ಮೆರೆದಿದ್ದಾರೆ.

ಯರ್ಜೇನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜ್, ರೈತ ನಂಜಪ್ಪನಾಯಕ ಎಂಬುವರು ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ, 5 ಕೆಜಿ ತರಕಾರಿ ವಿತರಣೆ ಮಾಡಿದ್ದಾರೆ.

ತಾಪಂ ಇಒ ಪ್ರಕಾಶ್, ಸಿಪಿಐ ಗೋಪಾಲನಾಯಕ, ಮುಖಂಡರಾದ ಮೊಗಲಹಳ್ಳಿ ಜಯ್ಯಣ್ಣ, ಸಂಜೀಮೂರ್ತಿ, ದೇವರಾಜ್, ಕೃಷ್ಣಪ್ಪ, ಬಿ.ಎನ್. ತಿಪ್ಪೇಸ್ವಾಮಿ, ಬಸವರಾಜ್ ಇತರರಿದ್ದರು.