ಜಿಲ್ಲೆ

ಕೆರೆಯಲ್ಲಿ ಮುಳುಗಿ ಯುವಕ ಸಾವು

Chitradurga

ಮೊಳಕಾಲ್ಮೂರು: ಹೋಳಿ ಹಬ್ಬ ಆಚರಿಸಿ ಸ್ನಾನ ಮಾಡಲೆಂದು ಸ್ನೇಹಿತರ ಜತೆ ಪಟ್ಟಣದ ಕೊತಲಗುಂದಿ ಕೆರೆಗೆ ಹೋಗಿದ್ದ ಯುವಕನೊಬ್ಬ ಮಂಗಳವಾರ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಗಣೇಶ (22) ಮೃತ ಯುವಕ. ಪಟ್ಟಣದ ನಿವಾಸಿಯಾದ ಈತ, ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಮಧ್ಯಾಹ್ನ ಕೆರೆಯಲ್ಲಿ ಸ್ನಾನಕ್ಕೆ ಬಂದಿದ್ದ ಎನ್ನಲಾಗಿದೆ. ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.