ಮೊಳಕಾಲ್ಮೂರು: ತಾಲೂಕಿನ ರಾಂಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕ ಕೋವಿಡ್ ಹೆಲ್ತ್ ಸೆಂಟರ್ ತೆರೆಯಲು ಪೂರ್ವ ಸಿದ್ಧತೆಗಳನ್ನು ಡಿಎಚ್‌ಒ ಡಾ.ಪಾಲಾಕ್ಷ ವೀಕ್ಷಿಸಿದರು.
ರಾಂಪುರ ಸಾರ್ವಜನಿಕ ಆಸ್ಪತ್ರೆ ಕೇಂದ್ರದಲ್ಲಿ ತೆರೆಯುವ 15 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಹೆಲ್ತ್ ಸೆಂಟರ್ ಗುರುವಾರ ವೀಕ್ಷಿಸಿದರು.
ಸಾಂಸ್ಥಿಕ ಕ್ವಾರಂಟೈನ್‌ಗೆ ಮಾಡುವವರಿಗೆ, ಕರೊನಾ ರೋಗ ಲಕ್ಷ್ಮಣ ಇರುವವರಿಗೆ ಪ್ರತ್ಯೇಕ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ. ಅಗತ್ಯ ಮಾನವ ಸಂಪನ್ಮೂಲ, ಸಲಕರಣೆಗಳನ್ನು ಇಟ್ಟುಕೊಂಡು ಜಾಗರೂಕತೆಯಿಂದ ಇರಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಪದ್ಮಾವತಿ, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಡಿ.ಚಿದಾನಂದಪ್ಪ, ಡಾ.ಮಧುಕುಮಾರ್, ಡಾ.ಚನ್ನಬಸವರಾಜ್, ಜಿಲ್ಲಾ ಮೇಲ್ವಿಚಾರಕ ಹನುಮಂತಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಆರ್‌ಆರ್ ತಂಡದ ಸಿಬ್ಬಂದಿ ಒ.ಶ್ರೀನಿವಾಸ್, ವೈ.ತಿಪ್ಪೇಸ್ವಾಮಿ, ಅರುಣ್‌ಕುಮಾರ್, ಪ್ರವೀಣ್ ಬಾಬು ಇತರರಿದ್ದರು.