ಮೊಳಕಾಲ್ಮೂರು: ಬಿರುಬಿಸಿಲಿಗೆ ಬೆಂಡಾಗಿದ್ದ ಮೊಳಕಾಲ್ಮೂರು ತಾಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಸುರಿದ ಮಳೆ ತಂಪರೆಯಿತು.
ಮೊಳಕಾಲ್ಮೂರು. ನೇರ‌್ಲಹಳ್ಳಿ, ಮರ‌್ಲಹಳ್ಳಿ ಸೇರಿ ವಿವಿಧೆಡೆ ಗಾಳಿ ಸಹಿತ ಬಿರುಸು ಮಳೆಯಾಗಿದೆ. ಮುಂಗಾರು ಬಿತ್ತನೆ ಬೇಸಾಯಕ್ಕೆ ಇದರಿಂದ ಸಹಕಾರಿ ಆಗಲಿದೆ ಎಂದು ರೈತ ವರ್ಗ ಹರ್ಷ ವ್ಯಕ್ತಪಡಿಸಿದೆ.