ಜಿಲ್ಲೆ

ಆಂಧ್ರ-ಕರ್ನಾಟಕ ಸಂಪರ್ಕ ರಸ್ತೆ ಬಂದ್

Chitradurga

ಮೊಳಕಾಲ್ಮೂರು: ಆಂಧ್ರ ಪ್ರದೇಶದ ರಾಯದುರ್ಗದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾರಣ ಕರ್ನಾಟಕ ಗಡಿ ಭಾಗದ ರಸ್ತೆ ಸಂಪರ್ಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದರು.

ತಾಲೂಕಿನ ಪೆನ್ನಮನಹಳ್ಳಿ ಸಮೀಪದ ಚೆಕ್‌ಪೋಸ್ಟ್ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಆಂಧ್ರ ಮತ್ತು ಕರ್ನಾಟಕ ಸಂಪರ್ಕ ರಸ್ತೆ ಬಂದ್ ಮಾಡಿಸಿ ಮಾತನಾಡಿದರು.

ಆಂಧ್ರದಲ್ಲಿ ಕರೊನಾ ಸೋಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಗಡಿ ಭಾಗದ ಉಡೇವು, ಹುಚ್ಚಂಗಿದುರ್ಗ ಚೆಕ್‌ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿ, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.